ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಅಗ್ನಿಪಥ ಯೋಜನೆಯು ಖಾಸಗೀಕರಣ ಬಲಿಷ್ಠ ಮಾಡುವ ಹುನ್ನಾರ: ಪಿ.ಎಚ್.ನೀರಲಕೇರಿ 

Last Updated 17 ಜೂನ್ 2022, 8:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಸೈನಿಕರ ನೇಮಕಾತಿಗೆ ಜಾರಿಗೆ ಮುಂದಾಗಿರುವ ಅಗ್ನಿಪಥ ಯೋಜನೆಯನ್ನು‌ ಕೂಡಲೇ ಕೈಬಿಡಬೇಕು. ಖಾಸಗೀಕರಣ ಬಲಿಷ್ಠ ಮಾಡುವ ಹುನ್ನಾರ ಈ ಯೋಜನೆಯಲ್ಲಿ ಅಡಗಿದೆ. ನಿರುದ್ಯೋಗ ಹೆಚ್ಚಿಸುವ ಕೆಲಸವನ್ನು ಮೋದಿ‌ ನೇತೃತ್ವದ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಪಿ.ಎಚ್.ನೀರಲಕೇರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ರಕ್ಷಣಾ ಇಲಾಖೆಯಲ್ಲಿ ಖಾಸಗೀಕರಣದ ಹೆಸರಲ್ಲಿ ಕೇಸರೀಕರಣ ಮಾಡುವ ಕೆಲಸಕ್ಕೆ ಕೈ ಹಾಕಿದ್ದೀರಿ, ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ. ಶ್ರೀರಾಮಸೇನೆ, ಆರ್ ಎಸ್ ಎಸ್, ಭಜರಂಗದಳ ಕಾರ್ಯಕರ್ತರಿಗೆ ತರಬೇತಿ ನೀಡುವ ಹುನ್ನಾರವೂ ಅಗ್ನಿಪಥ ಯೋಜನೆಯಲ್ಲಿ ಇದೆ. ಇದನ್ಮು ಯಾವುದೇ ಕಾರಣಕ್ಕೂ ಜಾರಿಗೆ ತರುವುದು ಬೇಡ. ಸೈನಿಕರ ನೇಮಕಾತಿ ಮಾಡಿಕೊಳ್ಳುವ ವಿಧಾನವೂ ಮೊದಲಿನಂತೆ ನಡೆಯಲಿ ಎಂದು ಒತ್ತಾಯಿಸಿದರು.

ಈಗಾಗಲೇ ಹಲವೂ ಯೋಜನೆ ಜಾರಿ ಮಾಡುವ ಮೂಲಕ ದೇಶವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಿರಿ. ಚುನಾವಣೆ ದೃಷ್ಟಿಯಿಂದ ಈ ಅಗ್ನಿಪಥ ಯೋಜನೆ ಜಾರಿಗೆ ಮುಂದಾಗುವ ಕೆಲಸ ಮಾಡುತ್ತಿದ್ದೀರಿ. ಯುವಕರನ್ನು ದಾರಿ ತಪ್ಪಿಸುವ ಕೆಲಸ ಮೊದಲು ಬಿಡಿ. ಉದ್ಯೋಗ ನೀಡುವ ಕೆಲಸ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT