ಧಾರವಾಡ: ‘ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್.ಪಾಟೀಲ ಅವರು ನೌಕರರ ವರ್ಗಾವಣೆಯಲ್ಲಿ ನಿಯಮ ಪಾಲಿಸಿಲ್ಲ. ಅವರ ಅವಧಿಯಲ್ಲಿ ವರ್ಗಾವಣೆ ಮಾಡಲಾದವರ ಪಟ್ಟಿ ಕೇಳಿದರೂ ಕೊಟ್ಟಿಲ್ಲ’ ಎಂದು ಕೃಷಿ ವಿಶ್ವವಿದ್ಯಾಲಯದ ವಿ ವ್ಯವಸ್ಥಾಪನಾ ಮಂಡಳಿ (ಬಿಒಎಂ) ಸದಸ್ಯ ರವಿ ಬಿ. ಮಾಳಿಗೇರ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರ್ಗಾವಣೆ ನೀತಿ ಪ್ರಕಾರ ಪ್ರತಿ ವರ್ಷ ಮಾರ್ಚ್ನಿಂದ ಮೇ ವರೆಗೆ ವರ್ಗಾವಣೆ ಪ್ರಕ್ರಿಯೆ ನಡೆಯಬೇಕು. ಆದರೆ, ಪ್ರೊ. ಪಿ.ಎಲ್. ಪಾಟೀಲ ಅವರು ವರ್ಷಪೂರ್ತಿ ವರ್ಗಾವಣೆ ಪ್ರಕ್ರಿಯೆ ನಡೆಸಿದ್ದಾರೆ. ಸಮಿತಿಯ ಸಲಹೆ ಪಡೆಯದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ’ ಎಂದು ದೂರಿದರು.

‘ಕುಲಪತಿಯಾಗಿ ಕಾರ್ಯಭಾರ ವಹಿಸಿಕೊಂಡಾಗಿನಿಂದ ಈವರೆಗೆ ವರ್ಗಾವಣೆ ಮಾಡಿರುವ ನೌಕರರ ಪಟ್ಟಿ ಕೊಡುವಂತೆ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಕೋರಿದ್ದೇವೆ. ಈವರೆಗೆ ಅವರು ಕೊಟ್ಟಿಲ್ಲ. ವರ್ಗಾವಣೆ ವಿವರ ನೀಡದಿರುವುದು ಅನುಮಾನಗಳಿಗೆ ಎಡೆಮಾಡಿದೆ. ಅಕ್ರಮ ನಡೆದಿರುವ ಶಂಕೆ ಇದೆ. ರಾಜ್ಯಪಾಲರು, ಮುಖ್ಯಮಂತ್ರಿ, ಕೃಷಿ ಸಚಿವ, ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಿದ್ದೇವೆ’ ಎಂದರು.

‘ಒಮ್ಮೆ ವರ್ಗಾವಣೆ ಮಾಡಿದ ನೌಕರರನ್ನು ಮೂರು ದಿನ, 15 ದಿನ, ಎರಡು ತಿಂಗಳಿಗೆ ಮತ್ತೆ ವರ್ಗಾವಣೆ ಮಾಡಲಾಗಿದೆ. ಕೆಲವರು ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಶ್ವವಿದ್ಯಾಲಯ ವ್ಯಾಪ್ತಿಯ 28 ಸಂಶೋಧನಾ ಕೇಂದ್ರಗಳಲ್ಲಿ 20 ಕೇಂದ್ರಗಳು ಮೂರು ವರ್ಷಗಳಿಂದ ಆರ್ಥಿಕ ನಷ್ಟ ಎದುರಿಸುತ್ತಿವೆ. 2023–24ನೇ ಸಾಲಿನಲ್ಲಿ ₹1.05 ಕೋಟಿ ನಷ್ಟವಾಗಿದೆ. ವರ್ಗಾವಣೆ ಅತಿರೇಕದಿಂದಾಗಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವಾಗಿದೆ’ ಎಂದು ಆಪಾದಿಸಿದರು.

ಮಾಲತೇಶ ಶಾಗೋಟಿ, ಬಿಒಎಂ ಸದಸ್ಯರಾದ ವೀರನಗೌಡ ಪಿ.ಪೊಲೀಸ್ಗೌಡರ, ಬಸವರಾಜ ಕುಂದಗೋಳಮಠ, ಪಾರ್ವತಿ ಕುರ್ಲೆ ಪತ್ರಿಕಾಗೋಷ್ಠಿಯಲ್ಲಿದ್ದರು.

‘ಪ್ರಭಾರ ಹೊಣೆಯಿಂದ ಪ್ರೊ. ಎ.ಜಿ.ಕೊಪ್ಪಾಡ ಬಿಡುಗಡೆ’

‘ಪ್ರೊ.ಎ.ಜಿ.ಕೊಪ್ಪಾಡ ಅವರು ಆಡಳಿತಾಧಿಕಾರಿ ಹುದ್ದೆಯ ಪ್ರಭಾರದಿಂದ ಫೆ.2ರಂದು ಬಿಡುಗಡೆಯಾಗಿದ್ದಾರೆ. ಪ್ರಭಾರಿ ಆಡಳಿತಾಧಿಕಾರಿಯಾಗಿದ್ದ ಅವರಿಗೆ ವ್ಯವಸ್ಥಾಪನಾ ಮಂಡಳಿ ಸದಸ್ಯರಿಗೆ ವರ್ಗಾವಣೆ ವಿವರ ಒದಗಿಸಲಾಗಿಲ್ಲ ಕುಲಪತಿ ನಿರ್ದೇಶನದಂತೆ ವಿವರಗಳನ್ನು ನೀಡಲಾಗದೆ ಬಿಡುಗಡೆ ಹೊಂದಿದ್ದಾರೆ’ ಎಂದು ರವಿ ಮಾಳಿಗೇರ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.