ಶನಿವಾರ, ಜುಲೈ 31, 2021
27 °C

ಜೂನ್ 8ರಿಂದ ಹುಬ್ಬಳ್ಳಿ-ಧಾರವಾಡದ ಎಲ್ಲ ಇಂದಿರಾ ಕ್ಯಾಂಟೀನ್‌ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಭೀತಿಯಿಂದ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಅವಳಿ ನಗರದಲ್ಲಿ ಮುಚ್ಚಲಾಗಿದ್ದ ಉಳಿದ ನಾಲ್ಕೂ ಇಂದಿರಾ ಕ್ಯಾಂಟೀನ್‌ಗಳು ಜೂನ್‌ 8ರಿಂದ ಪುನರಾರಂಭವಾಗಲಿವೆ.

ಅವಳಿ ನಗರದಲ್ಲಿ ಒಟ್ಟು ಒಂಬತ್ತು ಕ್ಯಾಂಟೀನ್‌ಗಳಿವೆ. ಮೇ 7ರಂದು ಹುಬ್ಬಳ್ಳಿಯ ಕಿಮ್ಸ್‌, ಉಣಕಲ್‌, ಹೊಸ ಬಸ್‌ನಿಲ್ದಾಣ, ಧಾರವಾಡದಲ್ಲಿ ಬಸ್‌ ನಿಲ್ದಾಣ ಹಾಗೂ ಮಿನಿ ವಿಧಾನಸೌಧದ ಆವರಣದಲ್ಲಿರುವ ಕ್ಯಾಂಟೀನ್‌ಗಳು ಆರಂಭವಾಗಿದ್ದವು. 8ರಿಂದ ಹಳೇ ಹುಬ್ಬಳ್ಳಿ, ಬೆಂಗೇರಿ, ಎಸ್‌.ಎಂ ಕೃಷ್ಣನಗರ ಮತ್ತು ಬಂಕಾಪುರ ಚೌಕ್‌ ಬಳಿ ಇರುವ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಲಿವೆ ಎಂದು ಕ್ಯಾಂಟೀನ್‌ಗಳ ಗುತ್ತಿಗೆದಾರ ಮನೋಹರ ಮೋರೆ ಹೇಳಿದ್ದಾರೆ.

ಕ್ಯಾಂಟೀನ್‌ನಲ್ಲಿ ಸದ್ಯಕ್ಕೆ ಬೆಳಿಗ್ಗೆ 7 ಗಂಟೆಯಿಂದ 9ರ ತನಕ ಮತ್ತು ಮಧ್ಯಾಹ್ನ 12ರಿಂದ 2.30ರ ತನಕ ಪಾರ್ಸಲ್‌ ಕೊಡಲಾಗುತ್ತಿದ್ದು, 8ರ ಬಳಿಕ ರಾತ್ರಿ 9ರ ತನಕ ಕ್ಯಾಂಟೀನ್‌ ತೆರೆದಿರುತ್ತದೆ. ಕಿಮ್ಸ್‌ ಹುಬ್ಬಳ್ಳಿ ಮತ್ತು ಧಾರವಾಡದ ಬಸ್‌ ನಿಲ್ದಾಣಗಳ ಸನಿಹದಲ್ಲಿರುವ ಕ್ಯಾಂಟೀನ್‌ಗಳಿಗೆ ಹೆಚ್ಚು ಬೇಡಿಕೆ ಕಂಡು ಬರುತ್ತಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು