ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಮದೇವ ಮಹಾರಾಜರ ಪುಣ್ಯತಿಥಿ ಆಚರಣೆ

Published 2 ಆಗಸ್ಟ್ 2024, 15:57 IST
Last Updated 2 ಆಗಸ್ಟ್ 2024, 15:57 IST
ಅಕ್ಷರ ಗಾತ್ರ

ಅಳ್ನಾವರ: ಇಲ್ಲಿನ ಇಂದಿರಾ ನಗರ ಬಡಾವಣೆಯ ವಿಠ್ಠಲ ರುಕುಮಾಯಿ ಮಂದಿರದಲ್ಲಿ  ನಾಮದೇವ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ಜರುಗಿತು.

ಗುರುವಾರ ಜ್ಞಾನೇಶ್ವರಿ ಗ್ರಂಥ ಸ್ಥಾಪನೆ, ಜ್ಞಾನೇಶ್ವರಿ ಪಾರಾಯಣ, ಹರಿಪಾಠ, ಪ್ರವಚನ, ಕೀರ್ತನೆ, ಭಜನೆ, ಹರಿ ಜಾಗರಣೆ ಸೇರಿದಂತೆ ವಿವಿಧ  ದಾರ್ಮಿಕ ಕಾರ್ಯಕ್ರಮಗಳು ನಡೆದವು.

ಅಳ್ನಾವರ, ಗೋದಳ್ಳಿ, ಹಳಿಯಾಳ, ದುಸಗಿ, ಬೆಣಚಿ, ತೇರಗಾಂವ, ಕಡಬಗಟ್ಟಿ, ಹೂಲಿಕೇರಿ, ಪೂರ, ತಾವರಗಟ್ಟಿಯ ವಾರಕರಿ ಭಜನಾ ಮಂಡಳಿಯವರಿಂದ ಸಾಂಪ್ರದಾಯಿಕ
ಭಜನೆ ಕಾರ್ಯಕ್ರಮ ನಡೆಯಿತು.

ಶುಕ್ರವಾರ ಬೆಳಿಗ್ಗೆ ವಿಶೇಷ ಪೂಜೆ, ಕಾಕಡಾರತಿ ಕಾರ್ಯಕ್ರಮಗಳು ಜರುಗಿದವು. ನಂತರ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪ್ರತಿ ಮನೆ
ಎದುರು ಪಲ್ಲಕ್ಕಿ ಬಂದಾಗ ಭಕ್ತರು ನೀರು ಹಾಕಿ, ಆರತಿ ಮಾಡಿ ಭಕ್ತಿ ಸಮರ್ಪಿಸಿದರು. 

ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಬಂದು ದರ್ಶನ ಪಡೆದರು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT