ಅಳ್ನಾವರ: ಜನಗಣತಿ ಕಾರ್ಯ ದೇಶದ ಅಭ್ಯುದಯದಲ್ಲಿ ಮಹತ್ವ ಪಡೆದಿದೆ. ರಾಜ್ಯ, ಜಿಲ್ಲೆ ಮತ್ತು ದೇಶದ ಜನರ ಸ್ಥಿತಿ–ಗತಿ ನಿಖರವಾಗಿ ಅರಿಯುವ ಮೂಲಕ ಅಭಿವೃದ್ಧಿಯ ಹೊಸ ನೀತಿ ರೂಪಿಸಲು ಇದು ಸಹಕಾರಿ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮುಗದಮು ಹೇಳಿದರು.

ತಾಲ್ಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಮೊದಲ ಹಂತದ ಮನೆಗಣತಿ ಕಾರ್ಯಕ್ರಮಕ್ಕೆ ನಿಯೋಜನೆಗೊಂಡ ಮೇಲ್ವಿಚಾರಕರಿಗೆ ಹಾಗೂ ಗಣತಿದಾರರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಮೂರು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ ಕಾರ್ಯ. ಜನರು ನಿಖರವಾದ ಮಾಹಿತಿಯನ್ನು ನಿರ್ಭಯವಾಗಿ ನೀಡಿ ಸಹಕರಿಸಬೇಕು’ ಎಂದರು.

ಜನಗಣತಿ ಉಸ್ತುವಾರಿ ಅಧಿಕಾರಿ ಎಂ.ಎಸ್.ಬೆಂತೂರ ಮಾತನಾಡಿ, ‘ಗಣತಿಯಲ್ಲಿ ದೊರೆತ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಮನೆ ಬಾಗಿಲಿಗೆ ಬರುವ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಪ್ರಗತಿಗೆ ಕೈಜೋಡಿಸಬೇಕು. ಆನಲೈನ್ ಮೂಲಕವೂ ಮಾಹಿತಿ ನೀಡಲು ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.

ತರಬೇತಿ ಕೇಂದ್ರಕ್ಕೆ ಮಧ್ಯಾಹ್ನ ನೋಡಲ್ ಅಧಿಕಾರಿ ರಮೇಶ ಕಳಸದ ಭೇಟಿ ನೀಡಿದರು. ಎಂ.ಎಸ್.ದೇವೇಂದ್ರ ತಳವಾರ ಹಾಗೂ ಅಶೋಕ ಸನ್ನಿ ತರಬೇತಿ ನೀಡಿದರು. ಗ್ರಾಮೀಣ ಹಾಗೂ ಪಟ್ಟಣ ಹೀಗೆ ಎರಡು ವಿಭಾಗ ಮಾಡಿ ಸುಮಾರು 90ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಯಿತು. ಅಧುನಿಕ ತಂತ್ರಜ್ಞಾನ ಬಳಸಿ ಸ್ಮಾರ್ಟ್ ಬೋರ್ಡ್ ಮೂಲಕ ಮಾಹಿತಿ ಒದಗಿಸಲಾಯಿತು.

ಉಪ ತಹಶೀಲ್ದಾರ್ ಎಂ.ಎಸ್.ಬಿರಾದಾರ, ಎ.ಎಂ.ಮಂಗಳಗಟ್ಟಿ, ಆಹಾರ ನೀರಿಕ್ಷಕ ವಿನಾಯಕ ದೀಕ್ಷಿತ್, ಗುರುರಾಜ ಗಾಳಿ, ಸಂಪತಕುಮಾರ ಒಡೆಯರ, ಸುನಿಲ ಗುಂಡೊಪಕರ, ವಿನಾಯಕ ಮಾಯಣ್ಣವರ, ಸ್ವಾತಿ ನಂದಗಾವ, ಪ್ರವೀಣ ದೊಡ್ಡಮನಿ ಮತ್ತು ತಾಂತ್ರಿಕ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-24-2073690496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.