ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದಿರಮ್ಮನ ಕೆರೆಗೆ ಬಾಗಿನ ಅರ್ಪಣೆ

Published 2 ಆಗಸ್ಟ್ 2024, 15:56 IST
Last Updated 2 ಆಗಸ್ಟ್ 2024, 15:56 IST
ಅಕ್ಷರ ಗಾತ್ರ

ಅಳ್ನಾವರ: ಸಮೀಪದ ಹೂಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಗೆ ಶುಕ್ರವಾರ ಗ್ರಾಮಸ್ಥರು, ರೈತರು ಬಾಗಿನ ಅರ್ಪಿಸಿದರು.

ಗ್ರಾಮಸ್ಥರು ಬೆಳಿಗ್ಗೆ ಗ್ರಾಮದಿಂದ ಡೊಳ್ಳು ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಗಂಗಾ ಮಾತೆಯ ಮೂರ್ತಿ, ಕುಂಭದಾರತಿ ಜತೆಗೆ ಪೂಜಾ ಸಾಮಗ್ರಿಗಳನ್ನು ಹೊತ್ತು ಮೆರವಣಿಗೆ ಮೂಲಕ ಕೆರೆಗೆ ತೆರಳಿದರು.

ಅರ್ಚಕ ಚನ್ನಯ್ಯ ಆರಾಧ್ಯಮಠ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಮುಖಂಡ ಬಸವರಾಜ ಇನಾಮದಾರ, ಸರ್ವೋದಯ ನೀರು ಬಳಕೆದಾರರ ಸಂಘದ ಅಧ್ಯಕ್ಷ ಶಿವಾಜಿ ಡೊಳ್ಳಿನ ಮಾತನಾಡಿ, ‘ಕೆರೆಯನ್ನು ನಂಬಿಕೊಂಡ ಸಾಕಷ್ಟು ರೈತರು ಕೃಷಿ ಮಾಡುತ್ತಿದ್ದಾರೆ. ಗ್ರಾಮದ ಜೀವನಾಡಿಯಾಗಿರುವ ಕೆರೆ ತುಂಬಿರುವುದು ಸಮೃದ್ಧಿಯ ಸಂಕೇತ’ ಎಂದರು.

ವಿಷ್ಣು ಕಿತ್ತೂರ, ವಾಸು ಕೇದಾರ್ಜಿ, ಮಂಜು ಬೇಕ್ವಾಡಕರ, ರಮೇಶ ಮಿಟಗಾರ, ಆದಿತ್ಯ ಬೆಳಗಾವಿ, ಕಲ್ಯಾಣಿ, ಪ್ರೇಮಾ ಗಂಗಪ್ಪನವರ, ಶಾರದಾ ಕೇದಾರ್ಜಿ, ಹೂಗಾರ, ಸುಭಾಸ,
ಮಹಾಬಳೇಶ್ವರ ನರಗುಂದ, ಈರೇಶ ಜಿನ್ನಪ್ಪಗೋಳ, ಸುಶೀಲಾ ಟೋಪಣ್ಣವರ, ಮಲ್ಲಿಕಾರ್ಜುನ ಕಲ್ಲೂರ, ಪ್ರಸಾದಗೌಡರ, ರಸೂಲಸಾಬ ಡೆಂಕೆವಾಲೆ, ಅಶೋಕ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT