ಅಳ್ನಾವರ: ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಬಿರುಸಾಗಿ ಮಳೆ ಸುರಿದಿದೆ. ಮಳೆ ಗಾಳಿ ರಭಸಕ್ಕೆ ಕೆಲವೆಡೆ ಮನೆಗಳ ಚಾವಣಿಯ ಶೀಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ನಿಂಗಯ್ಯ ಚರಂತಿಮಠ ದೇಸಾಯಿ ಚಾಳ್ ಮತ್ತು ಕಾಳೆ ಪ್ಲಾಟ್ನಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಸಂಜೆ 5 ಗಂಟೆ ಹೊತ್ತಿಗೆ ಮಳೆಯ ಆರಂಭವಾಗಿ ಸುಮಾರು ಅರ್ಧಗಂಟೆ ಸುರಿಯಿತು. ಗುಡುಗು, ಮಿಂಚು, ಗಾಳಿ ಆರ್ಭಟ ಜೋರಾಗಿತ್ತು. ಪಟ್ಟಣದ ನಾಡಕಚೇರಿ ಆವರಣದಲ್ಲಿನ ಮರ ರಸ್ತೆಗೆ ಅಡ್ಡಲಾಗಿ ಉರುಳಿತ್ತು. ಆಜಾದ್ ಮುಖ್ಯ ರಸ್ತೆಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆಯಾಗಿತ್ತು. ಪಟ್ಟಣದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿತ್ತು.

ಮಳೆ, ಗಾಳಿಯಿಂದಾಗಿ ಸಂತೆಯಲ್ಲಿ ವ್ಯಾಪಾರಸ್ಥರು, ಜನರು ತೊಂದರೆ ಅನುಭವಿಸಿದರು. ವ್ಯಾಪಾರಸ್ಥರ ವಸ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡಿದರು. ಕಾಳೆ ಪ್ಲಾಟ್ನಲ್ಲಿ ಮನೆಯೊಂದರ ಚಾವಣಿಯ ಶೀಟುಗಳು ಹಾರಿ ಪಕ್ಕದ ಮನೆ ಮೇಲೆ ಬಿದ್ದಿವೆ. ಆ ಮನೆಯ ಚಾವಣಿ ಹಾನಿಯಾಗಿದೆ. ಪಟ್ಟಣದಲ್ಲಿ ಶೆಡ್ವೊಂದರ ಶೀಟುಗಳು ಹಾರಿ ಹೋಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.