ಅಳ್ನಾವರ: ‘ಬಡ ಜನರಿಗೆ ಅನುಕೂಲ ಆಗಲು ಸರ್ಕಾರ ಸಬ್ಸಿಡಿ ದರದಲ್ಲಿ ಪಡಿತರ ಧಾನ್ಯ ಉಚಿತವಾಗಿ ವಿತರಣೆ ಮಾಡುತ್ತಿದೆ. ಅದನ್ನು ಮಾರಾಟ ಮಾಡುವುದು ಬೇಡ. ಮಾರಾಟ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ’ ಎಂದು ಕೋಗಿಲಗೇರಿ ಗ್ರಾಮಸ್ಥರು ಆಗ್ರಹಿಸಿದರು.

ಕೋಗಿಲಗೇರಿ ಗ್ರಾಮದ ವಿಠ್ಠಲ ದೇವಸ್ಥಾನದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನ್ಯ ಭಾಗ್ಯ ಯೋಜನೆ ಬಗ್ಗೆ ಚರ್ಚೆ ನಡೆದು ಈ ಕುರಿತು ಧಾನ್ಯ ಮಾರಾಟ ಮಾಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಡಂಗುರ ಸಾರಬೇಕು. ಗ್ರಾಮಕ್ಕೆ ಪಡಿತರ ತುಂಬುವ ಗಾಡಿ ಬಾರದಂತೆ ತಡೆಯಬೇಕು’ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಹೊಸ ಪಡಿತರ ಚೀಟಿ, ಹೆಸರು ತಿದ್ದುಪಡಿ ವಿಷಯ ಬಗ್ಗೆ ಚರ್ಚೆ ನಡೆದು ಶೀಘ್ರದಲ್ಲಿಯೇ ಗ್ರಾಮದ ಪಡಿತರ ಸಮಸ್ಯೆ ಬಗೆಹರಿಸಲು ಪಡಿತರ ಗ್ರಾಮಸಭೆ ಕರೆದು ಸಮಸ್ಯೆ ಬಗೆಹರಿಸಲು ತೀರ್ಮಾನಿಸಲಾಯಿತು. ಗ್ರಾಮದಲ್ಲಿ 390 ಪಡಿತರ ಚೀಟಿ ಇದ್ದು, ಪಡಿತರ ವಿತರಣೆಯನ್ನು ನಿಗದಿತ ದಿನಕ್ಕೆ ಸೀಮಿತಗೊಳಿಸದೆ ಕನಿಷ್ಟ ಎರಡು ವಾರ ವಿತರಣೆಗೆ ವಿಸ್ತರಿಸಲು ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.

ಸಾರಿಗೆ ಬಸ್ ವ್ಯವಸ್ಥೆ ಸರಿಪಡಿಸಬೇಕು. ಶಾಲಾ ಸಮಯಕ್ಕೆ ಬರುವ ಬಸ್ ಗ್ರಾಮದ ಮಧ್ಯ ಭಾಗದ ಶಿವಾಜಿ ಸರ್ಕಲ್ವರೆಗೆ ಬರಬೇಕು,ಇನ್ನೂ ಹೆಚ್ಚಿನ ಬಸ್ ಸೇವೆ ಬೇಕು,ವಿದ್ಯುತ್ ಕಂಬ ಸರಿಪಡಿಸಬೇಕು, ಕೆರೆಯ ದಡದ ಮೇಲೆ ಇರುವ ವಿದ್ಯುತ್ ಕಂಬ ಬೀಳುವ ಹಂತದಲ್ಲಿದೆ ಅದನ್ನು ಸರಿಪಡಿಸಬೇಕು. ಹಲವೆಡೆ ಹೊಸದಾಗಿ ವಿದ್ಯುತ್ ಕಂಬ ಅಳವಡಿಸಿಕೊಳ್ಳಬೇಕು. ಅಂಗನವಾಡಿ ಕೇಂದ್ರಕ್ಕೆ ಹೋಗುವ ಹಾದಿಯನ್ನು ಕಾಂಕ್ರೀಟ್ ಮಾಡಬೇಕು ಎಂದು ಗ್ರಾಮಸ್ಥರು ತಿಳಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ ತುರ್ಕಾಣಿ ಮಾತನಾಡಿ, ನರೇಗಾ ಯೋಜನೆಯಡಿ ಸಾಕಷ್ಟು ಬದಲಾವಣೆ ತರಲಾಗುತ್ತಿದೆ ಎಂದರು.

ಆಹಾರ ಇಲಾಖೆಯ ನಿರೀಕ್ಷಕ ವಿನಾಯಕ ದೀಕ್ಷಿತ್, ಅರವಡಗಿ ಗ್ರಾಮ ಪಂಚಾಯಿತಿ ಪಿಡಿಒ ಸುಜಾತಾ, ಕಲ್ಮೇಶ ಬಡಿಗೇರ, ಎಂ.ಕೆ.ಬಾಗವಾನ್, ಸತೀಶ ಬಡಸ್ಕರ್, ಪುಷ್ಪಾ ಆನಂತಪೂರ, ರಾಹುಲ್ ಶಿಂದೆ, ಮಹಾಂತೇಶ ಬೋರಿಮನಿ, ಫಕ್ಕೀರಪ್ಪ ದಬಾಲಿ, ಶಂಕರ ಕಲಾಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-24-183778653

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.