ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಅಳ್ನಾವರ ಮತ್ತು ದಾಂಡೇಲಿ ನಡುವೆ ಸಂಚರಿಸುವ ಡೆಮು ರೈಲುಗಳ ಸಂಚಾರದ ದಿನ ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು, ಇದು ಮಾರ್ಚ್ 17ರಿಂದ ಜಾರಿಗೆ ಬರಲಿದೆ.

ಈ ಹಿಂದೆ ವಾರದಲ್ಲಿ ಆರು ದಿನ (ಭಾನುವಾರ ಹೊರತುಪಡಿಸಿ) ಸಂಚರಿಸುತ್ತಿದ್ದ ಡೆಮು ರೈಲುಗಳು, ಇನ್ನು ಮುಂದೆ ಗುರುವಾರ ಹೊರತುಪಡಿಸಿ ವಾರದ ಉಳಿದ ಆರು ದಿನ ಸಂಚರಿಸಲಿವೆ.

ಅಳ್ನಾವರ–ದಾಂಡೇಲಿ ಡೆಮು ರೈಲು (76501) ಅಳ್ನಾವರದಿಂದ ಬೆಳಿಗ್ಗೆ 5.30ರ ಬದಲಾಗಿ 5 ಗಂಟೆಗೆ ಹೊರಟು, ಬೆಳಿಗ್ಗೆ 6.15ರ ಬದಲು 5.45ಕ್ಕೆ ದಾಂಡೇಲಿ ತಲುಪಲಿದೆ. ದಾಂಡೇಲಿ–ಅಳ್ನಾವರ ಡೆಮು ರೈಲು (76502) ದಾಂಡೇಲಿಯಿಂದ ಬೆಳಿಗ್ಗೆ 6.45ರ ಬದಲು 6.15ಕ್ಕೆ ಹೊರಟು, ಬೆಳಿಗ್ಗೆ 7.30ರ ಬದಲು 7 ಗಂಟೆಗೆ ಅಳ್ನಾವರಕ್ಕೆ ತೆರಳಿಲಿದೆ.

ಅಳ್ನಾವರ–ದಾಂಡೇಲಿ ಡೆಮು ರೈಲು (76503) ಬೆಳಿಗ್ಗೆ 7.35ಕ್ಕೆ ಅಳ್ನಾವರದಿಂದ ಹೊರಟು, ಬೆಳಿಗ್ಗೆ 8.20ಕ್ಕೆ ದಾಂಡೇಲಿಗೆ ಬರಲಿದೆ. ದಾಂಡೇಲಿ–ಅಳ್ನಾವರ ಡೆಮು ರೈಲಿನ ( 76504) ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಅಳ್ನಾವರ–ದಾಂಡೇಲಿ ಡೆಮು ರೈಲು (76505) ಸಂಜೆ 7.30ರ ಬದಲು 6 ಗಂಟೆಗೆ ಅಳ್ನಾವರದಿಂದ ಹೊರಟು, ರಾತ್ರಿ 8.15ರ ಬದಲು ಸಂಜೆ 6.45ಕ್ಕೆ ದಾಂಡೇಲಿ ತಲುಪಲಿದೆ. ದಾಂಡೇಲಿ–ಅಳ್ನಾವರ ಡೆಮು ರೈಲು (76506 ) ರಾತ್ರಿ 8.30ರ ಬದಲು ಸಂಜೆ 7.05ಕ್ಕೆ ದಾಂಡೇಲಿಯಿಂದ ಹೊರಟು, 9.15ರ ಬದಲು ಸಂಜೆ 7.50ಕ್ಕೆ ಅಳ್ನಾವರ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.