ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಉಸಿರಾಟದ ಸಮಸ್ಯೆಗೆ ‘ಆ್ಯಂಬು ಬ್ಯಾಗ್’

ಒರಿಗೆಮಿ ಆಟೋಮೇಶನ್ ಸ್ಟಾರ್ಟ್‌ ಅಪ್‌ನಿಂದ ತಯಾರಿಕೆ
Last Updated 19 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಎದುರಾದಾಗ ಬಳಸುವ ದುಬಾರಿ ಬೆಲೆಯ ವೆಂಟಿಲೇಟರ್‌ ಬದಲು ಅತ್ಯಂತ ಕಡಿಮೆ ಬೆಲೆಯ ‘ಆಟೋಮೆಟಿಕ್ ಆ್ಯಂಬು ಬ್ಯಾಗ್ ರೆಸ್ಪಿರೇಟರ್’ ತಾಂತ್ರಿಕ ಉಪಕರಣವನ್ನು ನಗರದಒರಿಗೆಮಿ ಆಟೋಮೇಶನ್ ಸ್ಟಾರ್ಟ್‌ ಅಪ್‌ ಸಂಸ್ಥೆ ತಯಾರಿಸಿದೆ.

ಸಂಸ್ಥೆ ಆರು ತಿಂಗಳ ಹಿಂದೆಯೇ ಪ್ರಯೋಗ ಆರಂಭಿಸಿ ಈಗ ಸಲಕರಣೆ ತಯಾರಿಸಿದ್ದು, ಕೊರೊನಾ ಸೋಂಕಿತರಿಗೆ ಅನುಕೂಲವಾಗುತ್ತದೆ. ಈ ಸಲಕರಣೆಯ ಅನುಕೂಲಗಳ ಸಮಗ್ರ ಮಾಹಿತಿ ಒಳಗೊಂಡ ದಾಖಲೆಗಳನ್ನು ಸಂಸ್ಥೆ ಸಿಡಿಎಸ್‌ಸಿಒಗೆ (ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆ) ಕಳುಹಿಸಿದ್ದು, ಅನುಮೋದನೆ ಸಿಗಬೇಕಿದೆ. ಅನುಮತಿ ಸಿಕ್ಕ ಬಳಿಕ ಇನ್ನಷ್ಟು ಆ್ಯಂಬು ಬ್ಯಾಗ್ ತಯಾರಿಸಲಾಗುವುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ.

‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ವೆಂಟಿಲೇಟರ್‌ಗಳ ಅಗತ್ಯತೆಯೂ ಹೆಚ್ಚಾಗುತ್ತಿದೆ. ದುಬಾರಿ ಬೆಲೆಯ ವೆಂಟಿಲೇಟರ್‌ಗಳನ್ನು ತರಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಅಂದಾಜು ₹35 ಸಾವಿರ ವೆಚ್ಚದಲ್ಲಿ ತಯಾರಿಸಬಹುದಾದ ಆ್ಯಂಬು ಬ್ಯಾಗ್ ಸುಲಭವಾಗಿ ಖರೀದಿಸಬಹುದು’ ಎಂದುಆಟೋಮೇಶನ್ ಸ್ಟಾರ್ಟ್ ಅಪ್ ಸಂಸ್ಥೆ ಸ್ಥಾಪಕ ಸಾಗರ ವೀರಪಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ಎಂಜಿನಿಯರ್‌ಗಳಾದ ವೀರಪಣ್ಣವರ, ಕೆ. ರಾಹುಲ್‌ ಮತ್ತು ಸಮರ್ಥ ಕುಲಕರ್ಣಿ ಅವರ ತಂಡ ತಯಾರಿಸಿದ ಉಪಕರಣಕ್ಕೆ ಆನಂದ ಕಡಕೋಳ ಮಾರ್ಗದರ್ಶನ ನೀಡಿದ್ದಾರೆ.

‘ಸಿಡಿಎಸ್‌ಸಿಒ ಸಂಸ್ಥೆ ಅನುಮತಿ ಬಳಿಕ ಕಡಿಮೆ ಅವಧಿಯಲ್ಲಿ ಇನ್ನಷ್ಟು ಆ್ಯಂಬು ಬ್ಯಾಗ್‌ ಸಲಕರಣೆ ತಯಾರಿಸಿ ಈಗಿನ ತುರ್ತು ಅಗತ್ಯಕ್ಕೆ ಪೂರೈಸಲಾಗುವುದು. ಎಷ್ಟು ಸಿಬ್ಬಂದಿ ಕೆಲಸ ಮಾಡುತ್ತಾರೆ ಎನ್ನುವುದರ ಆಧಾರದ ಮೇಲೆ ಎಷ್ಟು ದಿನದಲ್ಲಿ ಒಂದು ಸಲಕರಣೆ ತಯಾರಿಸಬಹುದು ಎನ್ನುವುದನ್ನು ನಿರ್ಧರಿಸಬಹುದು. ರೋಗಿಗಳ ಉಸಿರಾಟದ ತೊಂದರೆ ನಿವಾರಣೆಗೆ ಆ್ಯಂಬು ಬ್ಯಾಗ್ ಅನುಕೂಲವಾಗುತ್ತದೆ. ಈ ಸಲಕರಣೆ ಜೊತೆ ಸಿಬ್ಬಂದಿ ಇರುವ ಅಗತ್ಯವಿಲ್ಲ’ ಎಂದು ಸಾಗರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT