ಯೂಸುಫ್ ಸವಣೂರು ಬಣಕ್ಕೆ ಜಯ

ಶನಿವಾರ, ಜೂಲೈ 20, 2019
26 °C
ಹುಬ್ಬಳ್ಳಿ ಅಂಜುಮನ್ – ಇ –ಇಸ್ಲಾಂ ಸಂಸ್ಥೆ ಚುನಾವಣಾ ಫಲಿತಾಂಶ

ಯೂಸುಫ್ ಸವಣೂರು ಬಣಕ್ಕೆ ಜಯ

Published:
Updated:
Prajavani

ಹುಬ್ಬಳ್ಳಿ: ಅಂಜುಮನ್‌–ಇ–ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಯೂಸುಫ್ ಸವಣೂರ ಬಣದ ಎಲ್ಲ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.

ಅಧ್ಯಕ್ಷರಾಗಿ ಯೂಸುಫ್ ಸವಣೂರ, ಉಪಾಧ್ಯಕ್ಷರಾಗಿ ಅಲ್ತಾಫ್ ಕಿತ್ತೂರ್‌, ಕಾರ್ಯದರ್ಶಿಯಾಗಿ ಬಶೀರ್ ಹಳ್ಳೂರ್‌, ಜಂಟಿ ಕಾರ್ಯದರ್ಶಿಯಾಗಿ ಅಬ್ದುಲ್‌ ಮುನಾಫ್‌ ಫಕ್ರುಸಾಬ್‌, ಕೋಶಾಧ್ಯಕ್ಷರಾಗಿ ದಾದಾಹೈರಾತ್‌ ಖೈರಾತಿ, ಆಸ್ಪತ್ರೆ ಮಂಡಳಿ ಕಾರ್ಯದರ್ಶಿಯಾಗಿ ಮಹ್ಮದಖಾನ್‌ ಪಠಾಣ ಆಯ್ಕೆಯಾಗಿದ್ದಾರೆ.

ಆಸ್ಪತ್ರೆ ಮಂಡಳಿ ಸದಸ್ಯರಾಗಿ ಅಕ್ಬರ್‌ ವಜೀರ್‌ಸಾಬ್‌ ಕುಮಟಾಕರ್‌, ಅಬ್ದುಲ್‌ ರಜಾಕ್‌, ಮಹ್ಮದ್‌ ಸಿರಾಜ್ ಮಕ್ತುಂಸಾಬ್‌, ಸಮಿವುಲ್ಲಾ ಮಕ್ತುಂ ಹುಸೇನ್‌ ಆಯ್ಕೆಯಾಗಿದ್ದಾರೆ.

ಪೋಷಕ ಮಂಡಳಿಗೆ ಅಬ್ದುಲ್‌ ರಜಾಕ್‌ ಮುಲ್ಲಾಸಾಬ್‌, ಜಮಾದರ್‌ ಅನೀಸ್‌ ಇಕ್ಬಾಲ್‌, ಮಹ್ಮದ್‌ ಇಕ್ಬಾಲ್‌ ಮಿಯಾನ್‌, ಅಮಾನುಲ್ಲಾಖಾನ್‌ ವಜೀರಖಾನ್‌, ಬ್ಯಾಲಿ ಅಯಾಜ್‌ ಅಹ್ಮದ್‌ನೂರ್‌ ಮಹ್ಮದ್‌, ಅಲ್ತಾಫ್‌ ಇಸ್ಮಾಯಿಲ್‌, ಜಿಲಾನಿ ಅಮಾನುಲ್ಲ, ಮಹ್ಮದ್ ಅಹ್ಮದ್‌ ಅಲ್ತಾಫ್‌ ಹುಸೇನ್‌, ಮಹ್ಮದ್‌ ಜಫಾರ್‌ ಮಹ್ಮದ್‌ ಖಾನ್‌, ಇಮ್ತಿಯಾಜ್‌ ಅಹ್ಮದ್‌ ಖಾಜಿಸಾಹೇಬ್‌ ಆಯ್ಕೆಯಾಗಿದ್ದಾರೆ.

ಯೂಸುಫ್‌ ಬಣಕ್ಕೆ ಸೇರಿದವರೇ ಶಿಕ್ಷಣ ಮಂಡಳಿಗೆ ಏಳು, ಅಜೀವ ಸದಸ್ಯ ಸ್ಥಾನಕ್ಕೆ 25 ಮಂದಿ ಆಯ್ಕೆಯಾಗಿದ್ದಾರೆ.

ವಿಜಯೋತ್ಸವ:

ನಗರದ ಘಂಟಿಕೇರಿ ನೆಹರೂ ಕಾಲೇಜಿನಲ್ಲಿ ಭಾನುವಾರ ಬೆಳಿಗ್ಗೆ 8 ರಿಂದ ಆರಂಭವಾದ ಮತ ಎಣಿಕೆ ಕಾರ್ಯ ಸಂಜೆ 5ರ ವರೆಗೂ ನಡೆಯಿತು.

ಅನ್ವರ್ ಮುಧೋಳ, ಇಸ್ಮಾಯಿಲ್ ಕಾಲೆಬುಡ್ಡೆ(ಜಬ್ಬಾರಖಾನ್‌ ಹೊನ್ನಳ್ಳಿ) ಬಣಗಳು ಯೂಸುಫ್‌ ಸವಣೂರು ಬಣಕ್ಕೆ ತೀವ್ರ ಪೈಪೋಟಿ ನೀಡಿದ್ದವು. ಆದರೂ, ಅಲ್ಪ ಮತಗಳ ಅಂತರದಿಂದ ಸವಣೂರ ಬಣ ಗೆಲುವು ಸಾಧಿಸಿತು. ಈ ಮೂಲಕ ಮಾಜಿ ಸಚಿವ ಜಬ್ಬಾರ್‌ಖಾನ್ ಹೊನ್ನಳ್ಳಿ ಗುಂಪಿನ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಿದ್ದಾರೆ.

2009ರಲ್ಲಿ ಸವಣೂರ ಬಣ ಅಂಜುಮನ್ ಸಂಸ್ಥೆಯ ಚುಕ್ಕಾಣಿ ಹಿಡಿದಿತ್ತು. ನಂತರದ ಎರಡು ಅವಧಿಯಲ್ಲಿ ಜಬ್ಬಾರ್‌ಖಾನ್‌ ಹೊನ್ನಳ್ಳಿ ಬಣ ಅಧಿಕಾರ ನಡೆಸಿ, ಮೂರನೇ ಅವಧಿಯಲ್ಲೂ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿತ್ತು.

ಫಲಿತಾಂಶ ಪ್ರಕಟವಾಗುತ್ತಿದಂತೆ ಬೆಂಬಲಿಗರು ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು. ನಂತರ ಗೆದ್ದ ಅಭ್ಯರ್ಥಿಗಳನ್ನು ತೆರೆದ ವಾಹನಗಳಲ್ಲಿ ಮೆರವಣಿಗೆ ಮಾಡಿದರು. ಪಟಾಕಿ ಸಿಡಿಸಿ, ಹೂಮಾಲೆ ಹಾಕಿದರು. ರಾತ್ರಿ 8ರ ವರೆಗೂ ವಿಜಯೋತ್ಸವ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !