ಕಲಘಟಗಿ: ‘ಮನುಷ್ಯರಾಗಿ ಜನಿಸಿದ ಮೇಲೆ ಸಮಾಜಕ್ಕೆ ಏನಾದರೂ ಕಾಣಿಕೆ ನೀಡಬೇಕು ಸಮಾಜದಿಂದ ಎಲ್ಲವನ್ನು ಪಡೆದಿದ್ದೆವೆ. ಕೊನೆಗೆ ನಾವು ಮನುಷ್ಯರಾಗಿ ಆದರೂ ಬಾಳಬೇಕು’ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಅಜಮತ್ ಉಲ್ಲಾಖಾನ್ ಜಾಗಿರದಾರ ಮಾತನಾಡಿದರು.

ಪಟ್ಟಣದ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಅಂಜುಮನ್ ಸಂಸ್ಥೆಯಿಂದ ಬುಧವಾರ ಭಕ್ತರಿಗೆ ಏರ್ಪಡಿಸಿದ್ದ ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದೇವಿಯರಿಗೆ ಉಡಿ ತುಂಬುವ ಮೂಲಕ ನಾವೆಲ್ಲರೂ ಒಂದೆ ಎನ್ನುವ ಸಾಮರಸ್ಯ ಮೆರೆದರು.

ಪ.ಪಂ ಮಾಜಿ ಅಧ್ಯಕ್ಷ ಸಿಕಂದರಬಾಷಾ ಬೇಪಾರಿ ಮಾತನಾಡಿ, ‘ನಮ್ಮ ಸಮಾಜದವರು ಜಾತ್ರೆಯ ಆರಂಭದಿಂದಲೂ ನಿಯಮಾವಳಿ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು ನಮ್ಮ ಊರಿಗೆ ಒಳ್ಳೆಯದಾಗಲಿ ಕಾಲಕಾಲಕ್ಕೆ ಮಳೆ ಬೆಳೆ ಸರಿಯಾಗಿ ಬರಲಿ ಎಂಬ ನಂಬಿಕೆಯಿದೆ. ಗ್ರಾಮದೇವಿಯರನ್ನ ಪ್ರಾರ್ಥಿಸುತ್ತವೆ‘ ಎಂದರು.

ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ, ಬಾಬಣ್ಣ ಅಂಚಟಗೇರಿ, ಸುಧೀರ ಬೋಳಾರ, ಕುಮಾರ ಖಂಡೆಕರ, ಪ್ರಮೋದ ಪಾಲ್ಕರ, ಬಾಳು ಖಾನಾಪೂರ, ರಾಜು ಚಿಕ್ಕಮಠ, ಶೌಕತಅಲಿ ತೇರಗಾಂವ, ಸಯ್ಯದಬಾಷಾ ಕಾರಿಗಾರ, ಹಸನಸಾಬ್ ಗಂಜಿಗಟ್ಟಿ, ಮಹಮ್ಮದಗೌಸ್ ಮುಲ್ಲಾ, ಸಾಧಿಕಬೇಗ್ ಮುಲ್ಲಾ, ದಾವಲಸಾಬ್ ಓಲೇಕಾರ, ಆಜಾದ್ ಮಲ್ಲಿಕನವರ ಇದ್ದರು.

ಗ್ರಾಮದೇವಿಯ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಪ್ರಸಾದ ಸೇವೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.