ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಯುತ ಜೀವನಕ್ಕೆ ಯೋಗ

ಅಣ್ಣಿಗೇರಿ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಯೋಗ ದಿನಾಚರಣೆ: ಸಚಿವ ಹಾಲಪ್ಪ ಆಚಾರ್‌
Last Updated 22 ಜೂನ್ 2022, 2:09 IST
ಅಕ್ಷರ ಗಾತ್ರ

ಅಣ್ಣಿಗೇರಿ: ‘ಮಾನವ ಆರೋಗ್ಯವಂತ
ನಾಗಿ ಜೀವನ ಸಾಗಿಸಲು ಯೋಗಭ್ಯಾಸ ಅತ್ಯವಶ್ಯ. ಒತ್ತಡ ನಿವಾರಣೆಗೆ ಅದು ಸಹಕಾರಿ. ಪ್ರತಿಯೊಬ್ಬರೂ ಯೋಗಾ
ಭ್ಯಾಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆಶ್ರಯದಲ್ಲಿ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಸಕ್ಕರೆ, ಕಬ್ಬು, ಜವಳಿ ಮತ್ತು ಕೈಮಗ್ಗ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ‘ಯೋಗದಿಂದ ಮನಸ್ಸು ಮತ್ತು ದೇಹ ರೋಗಮುಕ್ತವಾಗುತ್ತದೆ’ ಎಂದರು.

ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಸದ್ಗುರು ಸಮರ್ಥ ಡಾ.ಎ.ಸಿ.ವಾಲಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾಧಿಕಾರಿ ಡಾ.ಗುರುದತ್ತ ಹೆಗಡೆ, ಉಪವಿಭಾಗಾಧಿಕಾರಿ ಡಾ.ಅಶೋಕ ತೇಲಿ, ಜಿ.ಪಂ. ಸಿಇಒ ಡಾ.ಸುರೇಶ ಇಟ್ನಾಳ, ತಹಶೀಲ್ದಾರ್ ಮಂಜುನಾಥ ಅಮಾಸಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೀನಾಕ್ಷಿ ಅವಲೂರ ಶಾಂತಣ್ಣ, ಪುರಸಭೆ ಅಧ್ಯಕ್ಷೆ ಗಂಗಾ ಕರೆಟ್ಟನವರ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಸಿಡಿಪಿಒ ವಿಜಯಲಕ್ಷ್ಮೀ ಪಾಟೀಲ, ಬಿಇಒ ಬಿ.ಎಸ್.ಮಾಯಾಚಾರ್ಯ, ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಉಪಸ್ಥಿತರಿದ್ದರು.

ಕುಂದಗೋಳ ವರದಿ: ಪಟ್ಟಣದ ಹರಬಟ್ಟ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯನ್ನು ಶಿಕ್ಷಣ ಸಮಿತಿ ಚೇರ್ಮನ್‌ ಅರವಿಂದ ಎಂ ಕಟಗಿ ಉದ್ಘಾಟಿಸಿದರು. ಟಿ.ಎಸ್.ಗೌಡಪ್ಪನವರ, ಪ್ರಾಚಾರ್ಯ ಎಲ್.ಎಲ್. ಲಮಾಣಿ, ಅರ್.ಐ. ಬ್ಯಾಹಟ್ಟಿ, ಜಿ.ಎ.ಪೂಜಾರ, ಭರಮಣ್ಣ ಸೊರಟೂರ, ಶ್ರೀಕಾಂತ ಕಲಾಲ, ಟಿ.ಎಸ್.ಹಳೆಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT