ಶುಕ್ರವಾರ, ಮೇ 27, 2022
29 °C

ವಾರ್ಡ್‌ ಸಮಿತಿ ರಚನೆಗೆ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅವಳಿ ನಗರಗಳ 82 ವಾರ್ಡ್‌ಗಳಲ್ಲಿ ವಾರ್ಡ್ ಸಮಿತಿಗಳನ್ನು ರಚಿಸಲು ಮಹಾನಗರ ಪಾಲಿಕೆ ಅರ್ಜಿ ಆಹ್ವಾನಿಸಿದೆ.

ಪ್ರತಿ ಸಮಿತಿಯಲ್ಲಿ ಒಟ್ಟು 11 ಜನ ಸದಸ್ಯರು ಇರಲಿದ್ದು, ಆಯಾ ವಾರ್ಡ್‌ ಪ್ರತಿನಿಧಿಸುವ ಪಾಲಿಕೆ ಸದಸ್ಯ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇಬ್ಬರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು ಆಗಿರಬೇಕು. ಕನಿಷ್ಠ ಮೂವರು ಮಹಿಳೆಯರು, ಆಯಾ ಬಡಾವಣೆಗಳ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳನ್ನು ಪ್ರತಿನಿಧಿಸುವ ಇಬ್ಬರು ಸದಸ್ಯರಾಗಬಹುದು. ಪಾಲಿಕೆ ಸದಸ್ಯನಾಗಲು ಅನರ್ಹನಾದ ವ್ಯಕ್ತಿ ವಾರ್ಡ್‌ ಸಮಿತಿಯ ಸದಸ್ಯನಾಗಿ ನಾಮ ನಿರ್ದೇಶಿತವಾಗುವಂತಿಲ್ಲ ಎಂದು ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಸದಸ್ಯರಾಗ ಬಯಸುವವರು ಮಹಾನಗರ ಪಾಲಿಕೆಯ ವಲಯ ಕಚೇರಿಗಳಿಂದ ಅಥವಾ ಪರಿಷತ್‌ ಕಾರ್ಯದರ್ಶಿ ಕಚೇರಿಯಿಂದ ಅರ್ಜಿ ಪಡೆದು ಏ. 25ರ ಒಳಗಾಗಿ ವಲಯ ಕಚೇರಿ ಅಥವಾ ಪರಿಷತ್ ಕಾರ್ಯದರ್ಶಿ ಕಚೇರಿಗೆ ಸಲ್ಲಿಸಬೇಕು ಎಂದು ಕೋರಿದ್ದಾರೆ.

ಶೇ 50ರಷ್ಟು ಸ್ಥಾನ ಕೊಡಿ: ವಾರ್ಡ್‌ ಸಮಿತಿಯಲ್ಲಿ ಯುವಕ, ಯುವತಿಯರಿಗೆ ಶೇ 50ರಷ್ಟು ಅವಕಾಶ ಕಲ್ಪಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರಿಗೆ ಪತ್ರ ಬರೆದು ‘35 ವರ್ಷದ ಒಳಗಿನ ಯುವಜನತೆಗೆ ಅವಕಾಶ ಕೊಟ್ಟರೆ ರಾಜಕೀಯದಲ್ಲಿ ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ’ ಎಂದು ಪಕ್ಷದ ಹುಬ್ಬಳ್ಳಿ ಶಹರ ಯುವಕರ ಘಟಕದ ನಾಮದೇವ ಬೀಳಗಿ, ಅಲ್ಪಸಂಖ್ಯಾತರ ಯುವಕ ಘಟಕದ ಪ್ರಧಾನ ಕಾರ್ಯದರ್ಶಿ ಡೇನಿಯಲ್‌ ಈಕೊಸ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.