ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವರ್ಷದ 11 ತಿಂಗಳ ಬಾಲಕಿ ಆರ್ನಾ ಪಾಟೀಲಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಗೌರವ

ಸಾಮಾನ್ಯ ಜ್ಞಾನದಲ್ಲಿ ಹುಬ್ಬಳ್ಳಿಯ ಮಗುವಿನ ಸಾಧನೆ
Last Updated 28 ಅಕ್ಟೋಬರ್ 2022, 6:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾಮಾನ್ಯ ಜ್ಞಾನಕ್ಕಾಗಿ ನಗರದ ಶೆಟ್ಟರ ಕಾಲೊನಿಯ ಒಂದು ವರ್ಷದ 11 ತಿಂಗಳ ಬಾಲಕಿ ಆರ್ನಾ ಪಾಟೀಲ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬುರಡಕಟ್ಟಿ ಗ್ರಾಮದ ಶಿದ್ರಾಮಗೌಡ ಪಾಟೀಲ ಮತ್ತು ವಿದ್ಯಾಶ್ರೀ ಪಾಟೀಲ ಪುತ್ರಿಯಾದ ಆರ್ನಾ, ಬೆಳೆಯುವ ಸಿರಿ ಮೊಳೆಕೆಯಲ್ಲೇ ಎಂಬಂತೆ ಬುದ್ಧಿವಂತಿಕೆ ತೋರಿದ್ದಾಳೆ.

‘ನಾನು ಮತ್ತು ಪತ್ನಿ ಬಿಡುವಿದ್ದಾಗ ಹೇಳಿಕೊಟ್ಟ ಸಾಮಾನ್ಯ ಜ್ಞಾನವೇ ಆರ್ನಾ ಸಾಮಾನ್ಯ ಜ್ಞಾನದಲ್ಲಿ ಸಾಧನೆ ಮಾಡಲು ಪ್ರೇರಣೆ. ಒಂದು ವರ್ಷ 8 ತಿಂಗಳಿದ್ದಾಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಮಗಳು ಭಾಗವಹಿಸಿದ್ದಳು. 10 ಬಗೆಯ ತರಕಾರಿ, 11 ವಿವಿಧ ಹಣ್ಣು, 22 ಪ್ರಾಣಿಗಳ ಹೆಸರನ್ನು ಸರಾಗವಾಗಿ ಹೇಳುತ್ತಾಳೆ’ಎಂದು ತಂದೆ ಶಿದ್ರಾಮಗೌಡ ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕನ್ನಡ ಹಾಗೂ ಇಂಗ್ಲಿಷ್ ವರ್ಣಮಾಲೆಗಳನ್ನು ಪಟಪಟನೆ ಹೇಳುತ್ತಾಳೆ. ರಾಷ್ಟ್ರೀಯ ಚಿಹ್ನೆ, ದೇಹದ 15 ಭಾಗಗಳನ್ನು ಗುರುತಿಸುತ್ತಾಳೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಹಲವು ಮಾಹಿತಿಗಳನ್ನು ಬಲ್ಲವಳಾಗಿದ್ದಾಳೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT