ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಬುಕ್ ಆಫ್‌‌ ರೆಕಾರ್ಡ್‌ಗೆ ಆರ್ಯನ್

Last Updated 26 ನವೆಂಬರ್ 2020, 15:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕನ್ನಡದಲ್ಲಿ ಅಂಕಿ ಬರೆಯುವ, 100 ರಿಂದ 1ರ ವರೆಗೆ ಇಳಿಕೆ ಕ್ರಮದಲ್ಲಿ ಇಂಗ್ಲಿಷ್‌ ಸಂಖ್ಯೆ ಹೇಳುವ ಹುಬ್ಬಳ್ಳಿಯ ಆರ್ಯನ್‌ ಶೆಟ್ಟರ್ ಎಂಬ ಬಾಲಕನ ಸಾಧನೆ ಇಂಡಿಯಾ ಬುಕ್‌ ಆಫ್‌‌ ರೆಕಾರ್ಡ್‌ನಲ್ಲಿ ದಾಖಲಾಗಿದೆ.

186 ವಿರುದ್ಧಾರ್ಥಕ ಪದಗಳನ್ನು ಪಟ, ಪಟನೇ ಹೇಳುವ ಆರ್ಯನ್‌ ವಿಡಿಯೊಗಳನ್ನು ಅಕ್ಟೋಬರ್‌ನಲ್ಲಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಕಳುಹಿಸಿಕೊಡಲಾಗಿತ್ತು. ಬಾಲಕನ ಜ್ಞಾಪಕ ಶಕ್ತಿ ಗುರುತಿಸಿ, ಬುಕ್‌ನಲ್ಲಿ ದಾಖಲಿಸಿದ್ದಾರೆ ಎಂದು ಬಾಲಕನ ತಂದೆ ಕಿರಣ ಶೆಟ್ಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿನ್ಮಯ ವಿದ್ಯಾಲಯದಲ್ಲಿ ಒಂದನೇ ತರಗತಿ ಓದುತ್ತಿದ್ದು, ತಾಯಿ ನೀಲಾಂಬಿಕಾ ಶೆಟ್ಟರ್, ತಂದೆ ಕಿರಣ ಶೆಟ್ಟರ್‌ ಸಾಮಾನ್ಯ ಜ್ಞಾನದ ಬಗೆಗೆ ಹೇಳಿಕೊಟ್ಟಿದ್ದಾರೆ.

ಶ್ಲೋಕ ಹೇಳುವುದು, ನೃತ್ಯ, ಯೋಗಾಸನದ ಜತೆಗೆ ಚಿತ್ರಕಲೆಯನ್ನೂ ಕೂಡ ಮಾಡುತ್ತಾನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT