ಬುಧವಾರ, ಏಪ್ರಿಲ್ 21, 2021
23 °C

ರಾಜ್ಯದಲ್ಲಿ ಒವೈಸಿ ಆಟ ನಡೆಯಲ್ಲ: ಜಮೀರ್ ಅಹ್ಮದ್ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ರಾಜ್ಯದಲ್ಲಿ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಅಸಾದುದ್ದೀನ್ ಒವೈಸಿ ಆಟ ನಡೆಯುವುದಿಲ್ಲ. ಅವರ ಪಕ್ಷ ಬಿಜೆಪಿಯ ಬಿ ಟೀಮ್’ ಎಂದು ಶಾಸಕ ಬಿ.ಝಡ್. ಜಮಿರ್ ಅಹ್ಮದ್ ಖಾನ್ ಹೇಳಿದರು.

ಹುಬ್ಬಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಅದರಲ್ಲಿ ಯಾವುದೇ ಸಂಶಯ ಬೇಡ’ ಎಂದರು.

ಪಕ್ಷದ ಸ್ಥಳೀಯ ನಾಯಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಜಮೀರ್ ಅವರನ್ನು ಸನ್ಮಾನಿಸಿದರು. ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಇಸ್ಮಾಯಿಲ್ ತಮಟಗಾರ, ಶರಣಪ್ಪ ಕೊಟಗಿ, ದೀಪಾ ನಾಗರಾಜ್ ಗೌರಿ, ಅಲ್ತಾಫನವಾಜ್ ಕಿತ್ತೂರ, ಮೋಹನ ಹಿರೇಮನಿ, ದಶರಥ ವಾಲಿ, ಅಬ್ದುಲ್ ಗನಿ ವಲಿಅಹ್ಮದ, ‌ಇಮ್ರಾನ್ ಎಲಿಗಾರ, ತಾರಾದೇವಿ ವಾಲಿ, ನವೀದ್ ಮುಲ್ಲಾ, ಮುತ್ತಣ್ಣ ಶಿವಳ್ಳಿ, ಪ್ರಕಾಶ ಹಳಿಯಾಳ, ಜಯಲಕ್ಷ್ಮಿ ದೊಡ್ಡಮನಿ ಮುಂತಾದವರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು