ಮಂಗಳವಾರ, ಮಾರ್ಚ್ 9, 2021
18 °C

ಕುತೂಹಲ ಸಂಶೋಧನೆಗೆ ಮೂಲ: ಪ್ರಹ್ಲಾದ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹುಬ್ಬಳ್ಳಿ: ವಿದ್ಯಾರ್ಥಿಗಳಲ್ಲಿರುವ ಕುತೂಹಲಕ್ಕೆ ಜೀವ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಟಲ್ ಪ್ರಯೋಗಾಲಯಗಳನ್ನು (ಟಿಂಕರಿಂಗ್ ಲ್ಯಾಬ್) ಶಾಲೆಗಳಲ್ಲಿ ಆರಂಭಿಸುತ್ತಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ನಗರದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಟಲ್ ಪ್ರಯೋಗಾಲಯವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಮಕ್ಕಳ ಕುತೂಹಲ ಮುಂದೆ ಸಂಶೋಧನೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ವಿಜ್ಞಾನಿಗಳಾಗಿ ರೂಪಗೊಳ್ಳಬೇಕಾದರೆ ಕೇವಲ ಭಾಷಣದಿಂದ ಸಾಧ್ಯವಿಲ್ಲ ಎಂದು ಮನಗಂಡ ಪ್ರಧಾನಿ ನರೇಂದ್ರ ಮೋದಿ, ಈ ಯೋಜನೆ ಆರಂಭಿಸಿದ್ದಾರೆ. ಎರಡನೇ ಹಂತದಲ್ಲಿ ಅಯ್ಕೆಯಾದ 767 ಶಾಲೆಗಳಲ್ಲಿ ವಿವೇಕಾನಂದ ಶಾಲೆ ಸಹ ಒಂದು. ಐದು ವರ್ಷಗಳ ಕಾಲ ಈ ಪ್ರಯೋಗಾಲಯ ನಡೆಸಲು ಸರ್ಕಾರ ಅನುದಾನ ನೀಡಲಿದೆ’ ಎಂದರು.

‘ವಿಜ್ಞಾನಿ ದಿಢೀರ್ ಎಂದು ರೂಪುಗೊಳ್ಳುವುದಿಲ್ಲ. ಬಾಲ್ಯದಿಂದಲೇ ಆ ನಿಟ್ಟಿನಲ್ಲಿ ಕುತೂಹಲ ಬೆಳೆಸಿಕೊಳ್ಳಬೇಕಾಗುತ್ತದೆ. ವಿಜ್ಞಾನಕ್ಕೆ ಭಾರತ ಅಪಾರ ಕೊಡುಗೆ ನೀಡಿದೆ. ಶೂನ್ಯವನ್ನು ನೀಡಿದ್ದು ನಮ್ಮ ಭಾರತ, ಭೂಮಿ ಮಂಡಲ ಆಕಾರದಲ್ಲಿದೆ ಎಂಬ ವಿಷಯ ಮೊದಲೇ ಗೊತ್ತಿತ್ತು ಎಂಬುದಕ್ಕೆ ಆಧಾರಗಳಿವೆ. ಧರ್ಮ ಗ್ರಂಥದಲ್ಲಿಯೂ ಭೂ ಮಂಡಲ ಎಂಬ ಉಲ್ಲೇಖ ಇದೆ. ಆದರೆ ಮೊದಲು ಈ ವಿಷಯಗಳನ್ನು ಹೇಳಿಕೊಳ್ಳಲು ಕೀಳರಿಮೆ ಇತ್ತು’ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮ. ನಾಗರಾಜ, ವಿವೇಕಾನಂದ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ರವಿ ಬಿ ದಂಡಿನ್, ಬೇಸ್ ಸಂಸ್ಥೆಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಸುಧೀರ್ ಮೂರ್ತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು