ಸೋಮವಾರ, ಅಕ್ಟೋಬರ್ 26, 2020
28 °C
ಬೋಧಕೇತರ ನೌಕರರ ಸಂಘಟನಾ ಸಮಾವೇಶ: ಷಡಕ್ಷರಿ ಭರವಸೆ

ಹಳೇ ಪಿಂಚಣಿ ಸೌಲಭ್ಯಕ್ಕೆ ಪ್ರಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರಾಜ್ಯದ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಸೌಲಭ್ಯವನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಭರವಸೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘದ ರಚನೆ ಹಾಗೂ ಸಂಘಟನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ‘2006ರಿಂದ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಎಲ್ಲ ಎನ್.ಪಿ.ಎಸ್ ನೌಕರರಿಗೆ ಸಮಸ್ಯೆಯಾಗಿದ್ದು, ನೆಮ್ಮದಿಯಿಂದ ಬದುಕಲು ಹಳೇ ಪದ್ಧತಿ ಅಗತ್ಯವಾಗಿದೆ. ಸರ್ಕಾರದ ಮಟ್ಟದಲ್ಲಿ ಇದಕ್ಕೆ ಪ್ರಯತ್ನ ಮಾಡಲಾಗುವುದು’ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡಪ್ಪ ಪಾಟೀಲ ಮಾತನಾಡಿ ‘ಬೋಧಕೇತರ ನೌಕರರು ಅನೇಕ ಸಮಸ್ಯೆಗಳ ಸುಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಬೇಡಿಕೆಗಳನ್ನು ಈಡೇರಿಸಲು ಶ್ರಮಿಸುತ್ತೇನೆ’ ಎಂದರು.

ಆರ್. ಮೋಹನ್‍ಕುಮಾರ, ಎಸ್.ಆರ್. ನವೀನ, ಜಯಪ್ರಕಾಶ ಕುಂಬಾರ, ಮನೋಜ ಪಾಟೀಲ, ಹರೀಶ ಬೊಮ್ನಳ್ಳಿ, ಗಂಗಾಧರ ತೇರದಾಳ, ರೋಷಿಣಿ, ನಾಗಭೂಷಣ ಮಾತನಾಡಿದರು. ವೆಂಕಟೇಶ ಇನಾಮದಾರ ಪ್ರಾಸ್ತವಿಕವಾಗಿ ಮಾತನಾಡಿದರು.

ಶಿಕ್ಷಣ ಇಲಾಖೆಯ ಕೇಂದ್ರ ಸಂಘದ ಪ್ರಸಾದ, ವೆಂಕಟೇಶ ಮೂರ್ತಿ, ರವಿಶಂಕರ, ಗಿರೀಶ, ಮಾಜಿದ್ ಅಕ್ಕಲಕೋಟ, ಅಜಯಕುಮಾರ ಪಾಟೀಲ, ನಾಗರಾಜ ಮಾಳಗಿಮನಿ, ರಾಹುಲ್ ಮೇತ್ರಿ, ವ್ಹಿ.ಜಿ. ಸ್ವಾಮಿ, ಎಸ್.ವೈ. ಗೌಡರ, ಚೇತನ, ಶಾಮಲಾ, ಗಿರೀಶ ಮನೋಳಿ, ನಾಗರಾಜ ಎಂ, ಐ.ಎನ್. ಪಶುಪತಿಹಾಳ, ದಯಾನಂದ ಪಟ್ಟಣಶೆಟ್ಟಿ, ಮಂಜುನಾಥ ಯರಗಟ್ಟಿ, ಸುನೀಲ ಕುಲಕರ್ಣಿ, ಶಂಭು ಆನೇಗುಂದಿ ಬಾಗಲಕೋಟ, ಶರದ ಠಾಕೇಕರ, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು