ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಕ್ಸಿನ್‌ ಪಡೆಯಲು ಹಿಂಜರಿಕೆ ಸಹಜ: ಸಚಿವ ಡಾ.ಕೆ.ಸುಧಾಕರ್

Last Updated 19 ಜನವರಿ 2021, 6:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯವು ದೇಶದಲ್ಲೇ ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವಲ್ಲಿ ಮುಂದಿದೆ. ಲಸಿಕೆ ಪಡೆಯುವಾಗ ಮನುಷ್ಯನಿಗೆ ಹಿಂಜರಿಕೆ ಸಾಮಾನ್ಯ. ಆದರೂ ವೈದ್ಯಕೀಯ ಸಿಬ್ಬಂದಿ ಪಡೆಯುತ್ತಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಡೂರಿನಲ್ಲಿ ಲಸಿಕೆ ಪಡೆದ ವ್ಯಕ್ತಿ ಮೃತಪಟ್ಟ ಬಗ್ಗೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸ್ಪಷ್ಟತೆ ಸಿಗಲಿದೆ. ಲಸಿಕೆ ಸುರಕ್ಷಿತವಾಗಿದೆ. ನಾರಾಯಣ ಹೃದಯಾಲದ ಮುಖ್ಯಸ್ಥ ಡಾ. ದೇವಿ ಶೆಟ್ಟಿ ಸೇರಿದಂತೆ ಇನ್ನಿತರರು ಪಡೆದಿದ್ದಾರೆ, ಅದು ಸುರಕ್ಷಿತವಾಗಿದೆ ಎಂದರು.

ಸಿಎಂ ಯಡಿಯೂರಪ್ಪರಿಗೆ ಆಡಳಿತದ ಅನುಭವವಿದೆ. ಅಸಮಾಧಾನ ಶಮನ ಮಾಡಲಿದ್ದಾರೆ. ಅವರಿಗೆ ಗೊತ್ತು ಯಾರಿಗೆ ಸ್ಥಾನ ಕೊಡಬೇಕು, ಯಾರಿಗೆ ಇಲ್ಲ ಎಂಬುದು. ಪಕ್ಷದ ನಾಯಕ ಅಮಿತ ಶಾ ಅವರೇ ಸಿಎಂ ಆಗಿ ಯಡಿಯೂರಪ್ಪ ಅವಧಿ ಪೂರ್ಣ ಗೊಳಿಸಲಿದ್ದಾರೆ ಎಂದಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT