ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ‘ಶಿಕ್ಷಕ ವಿಕಾಸ’ ಪುರಸ್ಕಾರ ಪ್ರದಾನ

Last Updated 30 ನವೆಂಬರ್ 2019, 15:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಚೇತನ ವಾಣಿಜ್ಯ ಮಹಾವಿದ್ಯಾಲಯ, ಬಿ.ಸಿ.ಎ ಹಾಗೂ ನಿರ್ಮಲಾ ಫೌಂಡೇಷನ್‌ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಲ್ವರು ಶಿಕ್ಷಕರಿಗೆ ‘ಶಿಕ್ಷಕ ವಿಕಾಸ’ ಪುರಸ್ಕಾರ ಹಾಗೂ 80 ಶಿಕ್ಷಕರಿಗೆ ‘ಅತ್ಯುತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರೌಢಶಾಲಾ ವಿಭಾಗದಲ್ಲಿ ಕಲಘಟಗಿ ತಾಲ್ಲೂಕಿನ ಕಾಮಧೇನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಂಕರಗೌಡ ಪಾಟೀಲ, ಕಲಾವಿಭಾಗದಲ್ಲಿ ನಲವಡಿಯ ಸರ್ಕಾರಿ ಎಸ್‌ಕೆಟಿಎಂ ಪದವಿಪೂರ್ವ ವಿದ್ಯಾಲಯದ ಸಂಗಪ್ಪ ಎಂ. ಕಮತರ, ಭಾಷಾ ವಿಭಾಗದಲ್ಲಿ ಹುಬ್ಬಳ್ಳಿಯ ನೆಹರೂ ಪದವಿಪೂರ್ವ ಕಾಲೇಜಿನ ಡಾ. ನಸೀಮಾ ಬಾನು ಮತ್ತು ವಿಜ್ಞಾನ ವಿಭಾಗದಲ್ಲಿ ಧಾರವಾಡದ ವೈ.ಬಿ. ಅಣ್ಣಿಗೇರಿ ಪದವಿಪೂರ್ವ ಕಾಲೇಜಿನ ಡಾ. ಪ್ರತಿಭಾ ದೇಶಮುಖೆ ಅವರು ಪ್ರಶಸ್ತಿಗೆ ಭಾಜನರಾದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮನಶಾಸ್ತ್ರ ಪ್ರಾಧ್ಯಾಪಕ ಡಾ. ಪಿ.ಎಸ್‌. ಹಳ್ಯಾಳ ‘ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ಸದಾ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಾ ಅವರ ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತಾರೆ. ಇಂಥ ಶಿಕ್ಷಕರನ್ನು ಗುರುತಿಸಿ ಪುರಸ್ಕರಿಸುವುದು ಉತ್ತಮ ಸಮಾಜದ ಕರ್ತವ್ಯ’ ಎಂದರು.

ಪ್ರೊ. ಕೊಟ್ಟೂರ ಶೆಟ್ಟರ್, ಅಲೋಕ್ ಚಕ್ರವರ್ತಿ, ವಿ.ಎಂ.ಕೊರವಿ, ಎ.ಆರ್.ವಡಕಣ್ಣವರ, ಪ್ರೊ. ಕೆ.ಎಸ್.ಕೌಜಲಗಿ, ಡಾ. ಪವನ.ಪಿ.ಅಪರಂಜಿ, ಡಾ.ಕೆ.ಸಿ.ಪಾಂಗಿ, ಪ್ರೊ.ಬಿ.ಎಫ್.ಗಾಮನಗಟ್ಟಿ, ಪ್ರೊ.ಬಿ.ಬಿ.ಶಿವನಗುತ್ತಿ, ಶಿಲ್ಪಾ ಜಡಿಮಠ, ಪ್ರೊ. ಪೂರ್ಣಿಮಾ, ಪ್ರೊ. ನಿಧಿ, ಪ್ರಶಾಂತ್ ಗಾಮನಗಟ್ಟಿ, ಪ್ರೊ. ನಾಗರಾಜ್, ಮಹೇಶ್ ಸಂಗಮ್ ಉಪಸ್ಥಿತರಿದ್ದರು. ಪ್ರೊ. ಭಾರತಿ.ಎಂ ‌ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT