ಹುಬ್ಬಳ್ಳಿ: ನವಲಗುಂದ ತಾಲ್ಲೂಕಿನ ಹಣಸಿ ಗ್ರಾಮದಲ್ಲಿ ದೇಶಪಾಂಡೆ ಫೌಂಡೇಷನ್, ಬೆಟರ್ ಕಾಟನ್, ಎಲ್‌ಡಿಸಿ ಮತ್ತು ಬೇಯರ್ ಕ್ರಾಪ್ ಸೈನ್ಸ್ ಸಹಯೋಗದಲ್ಲಿ ‘ಪ್ರಾಜೆಕ್ಟ್ ಜಾಗೃತಿ’ ರೈತ ಸಮಾವೇಶವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕ ಹುಳುವಿನ ನಿಯಂತ್ರಣ ಕುರಿತು ಸಲಹೆ ನೀಡುವ ಜತೆಗೆ ರೈತರಿಗೆ ಮೋಹಕ ಬಲೆಗಳನ್ನು ವಿತರಣೆ ಮಾಡಲಾಯಿತು. ಎಲ್‌ಡಿಸಿ ಮತ್ತು ದೇಶಪಾಂಡೆ ಫೌಂಡೇಷನ್ ವತಿಯಿಂದ ಪ್ರತಿ ರೈತರಿಗೆ ಎಂಟು ಮೋಹಕ ಬಲೆಗಳನ್ನು ವಿತರಿಸಲಾಯಿತು. ಇದರಿಂದ ಸುಮಾರು 400 ರೈತರು ಪ್ರಯೋಜನ ಪಡೆಯಲಿದ್ದಾರೆ.
ಬೇಯರ್ ಕ್ರಾಪ್ ಸೈನ್ಸ್ ಮುಖ್ಯಸ್ಥ ಶಂಬಣ್ಣ ಹಾದಿಮನಿ ಮೋಹಕ ಬಲೆಗಳ ಬಗ್ಗೆ ಮಾಹಿತಿ ನೀಡಿದರು. ನಿಂಗಪ್ಪ ಅವರು ಹೊಲದಲ್ಲಿ ಬಲೆಗಳ ಸ್ಥಾಪನೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಕೃಷಿ ಹೊಂಡ ವಿಭಾಗದ ಮುಖ್ಯಸ್ಥ ರಾಜಾ ಭಕ್ಷಿ, ಅಮೃತಾ ಹಿರೇಮಠ, ಐಶ್ವರ್ಯ ಗುರೂಜಿ ಭಾಗವಹಿಸಿದ್ದರು.
ಸಭೆಯಲ್ಲಿ ಶಿರಕೋಳ, ಮೊರಬ, ತಿರ್ಲಾಪುರ, ಶಾನವಾಡ, ಪಡೇಸೂರು, ಯಮನೂರು, ಬೆಲಹಾರ್‌ನ ರೈತರು ಭಾಗವಹಿಸಿದ್ದರು.