ಬುಧವಾರ, ಆಗಸ್ಟ್ 10, 2022
24 °C

ಹುಬ್ಬಳ್ಳಿ | 112 ಸಹಾಯವಾಣಿ; ಜಾಗೃತಿ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರೇಟ್‌ನ ನಿಸ್ತಂತು ವಿಭಾಗದಿಂದ (ವೈರ್‌ಲೆಸ್‌) 112 ಸಹಾಯವಾಣಿ ಸ್ಪಂದನ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ನಿಸ್ತಂತು ವಿಭಾಗದ ಇನ್‌ಸ್ಪೆಕ್ಟರ್‌ ಸಿದ್ದರಾಮಯ್ಯ ಟಿ. ಮಾತನಾಡಿ, ‘ಈ ಮೊದಲು ಆಂಬುಲೆನ್ಸ್‌, ಅಗ್ನಿ ದುರಂತ, ಪೊಲೀಸ್‌ ಸೇರಿದಂತೆ ವಿವಿಧ ಸಹಾಯಕ್ಕೆ ಬೇರೆ ಬೇರೆ ನಂಬರ್‌ಗೆ ಕರೆ ಮಾಡಬೇಕಿತ್ತು. ಆದರೆ, ಇದೀಗ 112 ಒಂದೇ ನಂಬರ್‌ಗೆ ಕರೆ ಮಾಡಿದರೆ ಎಲ್ಲ ಸಹಾಯವೂ ಹತ್ತು ನಿಮಿಷದಲ್ಲಿ ದೊರೆಯುತ್ತದೆ. ವಿದ್ಯಾರ್ಥಿನಿಯರಿಗೆ, ಹೆಣ್ಣುಮಕ್ಕಳಿಗೆ ಯಾರಾದರೂ ಚುಡಾಯಿಸಿದರೆ 112ಗೆ ಕರೆ ಮಾಡಿದ ತಕ್ಷಣ ಸಿಬ್ಬಂದಿ ಹಾಜರಾಗುತ್ತಾರೆ. ಯಾವುದೇ ತುರ್ತು ಸಂದರ್ಭದಲ್ಲಿ ಈ ನಂಬರ್‌ಗೆ ಕರೆ ಮಾಡಿದರೆ ತಕ್ಷಣ ಸಹಾಯ ದೊರೆಯುತ್ತದೆ’ ಎಂದರು.

ಪಿಎಸ್‌ಐ ಶಿವಯೋಗಿ ಅವರಾದಿ, ಕಾನ್‌ಸ್ಟೆಬಲ್‌ ಮಹ್ಮದ್‌, ಪ್ರಾಚಾರ್ಯ ಗಣಪತಿ ಎಚ್‌. ಹಾಗೂ ಕಾಲೇಜಿನ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.