ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೊದಲ್ಲಿರುವುದು ಯಡಿಯೂರಪ್ಪ ಧ್ವನಿಯೇ ಎಂಬುದು ಖಚಿತವಿಲ್ಲ: ಅಶ್ವತ್ಥನಾರಾಯಣ

Last Updated 2 ನವೆಂಬರ್ 2019, 9:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅನರ್ಹ ಶಾಸಕರ‌ ಬಗ್ಗೆ ಸಿಎಂ ಭಾವನಾತ್ಮಕವಾಗಿ ಮಾತನಾಡಿರುವುದು.ಇದು ಅವರದೇ ಧ್ವನಿ ಎನ್ನುವದು ಗೊತ್ತಿಲ್ಲ. ಯಾರೋ ರೆಕಾರ್ಡ್ ಮಾಡುವುದು ತಪ್ಪು. ಇದಕ್ಕೆ ಹೆಚ್ಚಿನ ಮಾನ್ಯತೆ ಕೊಡಬಾರದು ಎಂದು ಉಪಮುಖ್ಯಮಂತ್ರಿಅಶ್ವತ್ಥ ನಾರಾಯಣ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಕೆಟ್ಟ ಆಡಳಿತ ನೀಡಿತ್ತು . ಅದಕ್ಕೆ ‌ನಾಂದಿ ಹಾಡಲು ಅನರ್ಹ ಶಾಸಕರು ಸಮರ್ಥ ನಿರ್ಧಾರ ಕೈಗೊಂಡಿದ್ದಾರೆ. ಅವರು ಮಾಡಿದ ಕಾರ್ಯ ರಾಜ್ಯವನ್ನು ಕಾಪಾಡುವಂತದು. ಅವರಿಗೆ ನಾವು ಹೆಚ್ಚು ಮಾನ್ಯತೆ ಹಾಗೂ ಗೌರವ ಕೊಟ್ಟರು ಸಾಲದು. ಈಗ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು.

ಸಿದ್ದರಾಮಯ್ಯ ಅವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಅವರಿಂದ ನಾವು ಹೇಳಿಸಿಕೊಳ್ಳುವ ಅವಶ್ಯಕತೆ ಕೂಡ ಇಲ್ಲ. ಅವರು ತಮ್ಮ ಬೆನ್ನು ನೋಡಿಕೊಳ್ಳಲಿ. ಅವರ ಕಾಲದಲ್ಲಿ ಬರಗಾಲವಿತ್ತು. ಅವರು ಬರಗಾಲದ ಅಂಕಿ ಅಂಶ ಮೊದಲು ಕೊಡಲಿ, ಬರಗಾಲದ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ಪ್ರವಾಸವನ್ನೇ ಮಾಡಲಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ.
ವಿರೋಧ ‌ಪಕ್ಷದಲ್ಲಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು‌ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಪಠ್ಯಪುಸ್ತಕದಿಂದಟಿಪ್ಪುವನ್ನು ತೆಗೆದು ಹಾಕುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪು ಪಠ್ಯವನ್ನು ಸಂಪೂರ್ಣವಾಗಿ ತಗೆಯುವ ಬದಲು ಅವರ ಮತಾಂಧತೆ, ಕ್ರೌರ್ಯ ವಿಚಾರಗಳು ಜನರಿಗೆ ತಿಳಿಯುವಂತಾಗಬೇಕು. ಮಕ್ಕಳು ಓದಬೇಕು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT