ಪರಿಸರಕ್ಕೆ ಮಾರಕವಾಗಿರುವ ಪಟಾಕಿ ನಿಷೇಧಿಸಲು ಒತ್ತಾಯ

7

ಪರಿಸರಕ್ಕೆ ಮಾರಕವಾಗಿರುವ ಪಟಾಕಿ ನಿಷೇಧಿಸಲು ಒತ್ತಾಯ

Published:
Updated:

ಹುಬ್ಬಳ್ಳಿ: ಪರಿಸರ ಮತ್ತು ಜೀವ ಸಂಕುಲಕ್ಕೆ ಮಾರಕವಾಗಿರುವ ಪಟಾಕಿಯನ್ನು ನಿಷೇಧಿಸಬೇಕು ಎಂದು ಕ್ರಿಸ್ಪ್ ಇಂಡಿಯಾ ಸಂಸ್ಥೆಯ ಸಂಯೋಜಕ ಸಂತೋಷ್ ಕುಮಾರ್ ಪೋತದಾರ ಒತ್ತಾಯಿಸಿದರು.

ದೇಶದಲ್ಲಿ ಸುಮಾರು 1200ಕ್ಕಿಂತ ಅಧಿಕ ಪಟಾಕಿ ಕಾರ್ಖಾನೆಗಳಿದ್ದು, ಅವುಗಳಲ್ಲಿ ಸುಮಾರು 900 ತಮಿಳುನಾಡಿನ ಶಿವಕಾಶಿಯಲ್ಲಿವೆ. ಭಾರಿ ಸಂಖ್ಯೆಯ ಬಾಲ ಕಾರ್ಮಿಕರು ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕಸ್ಮಿಕ ಅಗ್ನಿ ದುರಂತಗಳಲ್ಲಿ ನೂರಾರು ಮಂದಿ ಸಾವನ್ನಪ್ಪಿದ ಹಲವು ಉದಾಹರಣೆಗಳಿವೆ. ಪಟಾಕಿಯಿಂದಾಗಿ ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯವಾಗುತ್ತಿದೆ. ಉಸಿರಾಟ ಸಂಬಂಧಿ ಕಾಯಿಲೆಗಳಿಗೆ ಇದು ಕಾರಣವಾಗುತ್ತಿದೆ. ಪಕ್ಷಿಗಳ ಜೀವಕ್ಕೂ ಅಪಾಯ ತಂದೊಡ್ಡುತ್ತಿದೆ ಎಂದರು.

ಪಟಾಕಿ ಉದ್ಯಮದಿಂದ ಸರ್ಕಾರಕ್ಕೆ ಬರುತ್ತಿರುವ ಆದಾಯಕ್ಕಿಂತ ಎರಡು ಪಟ್ಟು ಹಣವನ್ನು, ಜನರು ಕಾಯಿಲೆ ಗುಣಪಡಿಸಿಕೊಳ್ಳಲು ಖರ್ಚು ಮಾಡುತ್ತಿದ್ದಾರೆ. ಆದ್ದರಿಂದ ಈ ಉದ್ಯಮವನ್ನು ನಿಷೇಧಿಸುವುದು ಒಳಿತು. ಈ ಬಗ್ಗೆ ಪ್ರಧಾನಿ ಹಾಗೂ ರಾಷ್ಟ್ರಪತಿಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು. ಪಟಾಕಿಯ ಕೇಡುಗಳ ಬಗ್ಗೆ ಸಂಸ್ಥೆ ನಿರಂತರವಾಗಿ ಜನ ಜಾಗೃತಿ ಮೂಡಿಸುತ್ತಿದೆ ಎಂದರು.

ಬೆಂಗಳೂರಿನ ಆರೂಢ ಸಂಸ್ಥೆಯ ಅಧ್ಯಕ್ಷ ಶಂಬುಲಿಂಗ ಹೂಗಾರ, ಧಾರವಾಡದ ಕೃಷ್ಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಹೂಗಾರ, ಹುಬ್ಬಳ್ಳಿಯ ವಸುಂಧರಾ ಪ್ರತಿಷ್ಠಾನದ ಅಧ್ಯಕ್ಷ ಮೇಘರಾಜ ಕೆರೂರ, ಭ್ರಷ್ಟಾಚಾರ ವಿರೋಧಿ ಆಂದೋಲನದ ನಿಜಲಿಂಗಪ್ಪ ಪತ್ತಾರ, ನಾಗರಾಜ ಕಾಲವಾಡ ಇದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !