ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ತತ್ವ ಪ್ರಚಾರಕ್ಕೆ ನಾನಾ ಮಾರ್ಗ

Last Updated 14 ಮಾರ್ಚ್ 2019, 13:07 IST
ಅಕ್ಷರ ಗಾತ್ರ

ಕೂಡಲಸಂಗಮ: ಮಾತೆ ಮಹಾದೇವಿ ಯುವ ಜನಾಂಗದಲ್ಲಿ ಬಸವ ತತ್ವ ಬಿತ್ತರಿಸಬೇಕು, ಅವರಲ್ಲಿ ಶರಣ ಸಂಸ್ಕೃತಿಬೆಳೆಸಬೇಕು ಎಂಬ ಉದ್ದೇಶದಿಂದ 1980ರಲ್ಲಿ ಲಿಂಗಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಬಸವದಳ ಸಂಘಟನೆ ಆರಂಭಿಸಿದರು. ಅದು ಇಂದು ದೇಶದ ಎಂಟುರಾಜ್ಯಗಳಲ್ಲಿ 1200ಕ್ಕೂ ಅಧಿಕ ಶಾಖೆ ಹೊಂದಿ ಬಸವ ಸಂಘಟನೆ, ಶರಣಸಂಸ್ಕೃತಿ ಬಿಂಬಿಸುತ್ತಿವೆ.

ಬಸವಣ್ಣನವರ ಜೀವನ ಚರಿತ್ರೆ, ವಿಚಾರಗಳನ್ನು ಸಿನಿಮಾದ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ 1983ರಲ್ಲಿ ‘ಕ್ರಾಂತಿಯೋಗಿ ಬಸವಣ್ಣ’ ಚಲನಚಿತ್ರ ನಿರ್ಮಿಸಿದ್ದರು.

ದೆಹಲಿ, ಚಿತ್ರದುರ್ಗ, ಸಾಸಲಟ್ಟಿ, ಬೀದರ್, ಕಲಬುರ್ಗಿ, ಬಳ್ಳಾರಿ, ಭದ್ರಾವತಿ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಬಸವ ಮಂಟಪ ನಿರ್ಮಿಸಿ ಸಮುದಾಯ ಪ್ರಾರ್ಥನೆ, ಶರಣ ಸಂಗ, ವಚನ ಪಠಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿದೇಶದಲ್ಲೂ ಬಸವ ತತ್ವ ಪ್ರಸಾರ ಮಾಡುವ ಉದ್ದೇಶದಿಂದ 1976ರಲ್ಲಿ ಇಂಗ್ಲೆಂಡ್, 1980, 1981, 2004ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದರು.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆದೊರಕಬೇಕು ಎಂಬ ಹೋರಾಟ, ಸಂಘಟನೆಗಾಗಿ 2005ರಲ್ಲಿ ದೆಹಲಿಯಲ್ಲಿ ಪ್ರಥಮ ಲಿಂಗಾಯತ ಧರ್ಮ ಸಮ್ಮೇಳನ, 2008ರಲ್ಲಿ ಏಪ್ರಿಲ್‌ನಲ್ಲಿ ಚೆನ್ನೈನಲ್ಲಿ ಎರಡನೇ ಲಿಂಗಾಯತ ಧರ್ಮ ಸಮ್ಮೇಳನ, 2011ರಲ್ಲಿ ಪುಣೆ, 2012ರಲ್ಲಿ ಬೆಂಗಳೂರಿನಲ್ಲಿ ರ‍್ಯಾಲಿ, 2013 ಮತ್ತು 2019ರಲ್ಲಿ ದೆಹಲಿಯಲ್ಲಿ ರ‍್ಯಾಲಿ ಹಮ್ಮಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT