ಅಗಲಿದ ಬಸವನಿಗೆ ಭಾವಪೂರ್ಣ ವಿಧಾಯ

7

ಅಗಲಿದ ಬಸವನಿಗೆ ಭಾವಪೂರ್ಣ ವಿಧಾಯ

Published:
Updated:
Deccan Herald

ಧಾರವಾಡ: ತಾಲ್ಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹಲವು ಪವಾಡಗಳ ಮೂಲಕ ಭಕ್ತರ ಪ್ರೀತಿಗಳಿಸಿ ಅಗಲಿದ ‘ಬಸವ’ನ ಮೆರವಣಿಗೆ ನಡೆಸಿದ ಗ್ರಾಮಸ್ಥರು ಭಾವಪೂರ್ಣ ವಿಧಾಯ ಹೇಳಿದರು.

ಗ್ರಾಮದ ಆರಾಧ್ಯ ದೇವರಾದ ಶೀಮರಡಿ ಬಸವನ ದೇವರಿಗೆ ಬಿಟ್ಟಿದ್ದ ಗೂಳಿಯು ಹಲವು ಪವಾಡಗಳ ಮೂಲಕ ಗ್ರಾಮಸ್ಥರ ಪ್ರೀತಿ ಹಾಗೂ ಭಕ್ತಿಗೆ ಪಾತ್ರವಾಗಿತ್ತು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಸವ, ಬುಧವಾರ ರಾತ್ರಿ ಮೃತಪಟ್ಟಿತು. 

ಬಸವನ ಅಗಲಿಕೆಯಿಂದ ದುಃಖತಪ್ತರಾದ ಗ್ರಾಮಸ್ಥರು, ಕೂಡಲೇ ಅಂತ್ಯಸಂಸ್ಕಾರದ ವಿಧಿವಿಧಾನಗಳಿಗೆ ವೇದಿಕೆ ಸಜ್ಜುಗೊಳಿಸಿದರು. ರಾತ್ರಿಪೂರ್ತಿ ಭಜನೆ ಮೂಲಕ ಜಾಗರಣೆ ಮಾಡಿದರು. ಗುರುವಾರ ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್ ಮೂಲಕ ಬಸವನ ಅಂತಿಮಯಾತ್ರೆಯ ಮೆರವಣಿಗೆ ಜರುಗಿತು. ಹಲವರು ಅಭಿಮಾನದಿಂದ ನೋಟುಗಳ ಮಾಲೆ ಸಿದ್ಧಪಡಿಸಿ ಬಸವನ ಕೊರಳಿಗೆ ಹಾಕಿ ಧನ್ಯರಾದರು. 

ಮಧ್ಯಾಹ್ನ ಶ್ರೀಮರಡಿ ಬಸವನಗುಡಿ ಬಳಿ ಅಗಲಿದ ಬಸವನನ್ನು ಸಮಾಧಿ ಮಾಡಲಾಯಿತು. ಹಲವರು ಅಶೃತರ್ಪಣ ಮೂಲಕ ವಿಧಾಯ ಹೇಳಿದರೆ, ಇನ್ನೂ ಕೆಲವರು ಬಸವನಿಗೆ ಜೈಕಾರ ಹಾಕಿ ಬೀಳ್ಕೊಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !