ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂದನಗುಡ್ಡ ಬಸವಣ್ಣ ರಥೋತ್ಸವ ರದ್ದು

Last Updated 7 ಆಗಸ್ಟ್ 2021, 13:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೊರೊನಾ ಸೋಂಕಿನ ಭೀತಿಯಿಂದ ಕಲಘಟಗಿ ತಾಲ್ಲೂಕಿನ ಬೂದನಗುಡ್ಡ ಬಸವಣ್ಣ ದೇವಸ್ಥಾನದ ರಥೋತ್ಸವ ಮತ್ತು ಅನ್ನಸಂತರ್ಪಣೆ ರದ್ದುಪಡಿಸಲಾಗಿದೆ’ ಎಂದುಬೂದನಗುಡ್ಡ ಬಸವಣ್ಣ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಈರಪ್ಪ ಕ.ಎಮ್ಮಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಡಳಿತದ ನಿರ್ದೇಶನದಂತೆ ಈ ಬಾರಿ ಪ್ರಸಾದ ವಿತರಣೆ, ಆಟಿಕೆ, ಕಾಯಿ ಮತ್ತು ಚಹಾ ಸೇರಿದಂತೆ ಯಾವುದೇ ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ಇರುವುದಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮಾರಂಭಕ್ಕೂ ನಿರ್ಬಂಧ ವಿಧಿಸಲಾಗಿದೆ’ ಎಂದರು.

‘ಶ್ರಾವಣ ಮಾಸದ ಪ್ರಯುಕ್ತಭಾನುವಾರದಿಂದ (ಆ.9) ಆ. 30ರ ವರೆಗೆ ಬಸವಣ್ಣನಿಗೆ ಅಭಿಷೇಕ ನಡೆಯಲಿದೆ.ಈ ಅವಧಿಯಲ್ಲಿ ‌ಅಂದಾಜು 110 ಪಲ್ಲಕ್ಕಿ ತಂಡಗಳು ಭಾಗವಹಿಸುವ ಸಾಧ್ಯತೆ ಇದೆ. ಪಲ್ಲಕ್ಕಿ ತಂಡದಲ್ಲಿ ನಾಲ್ಕು ಜನ ಮಾತ್ರ ಇರಬೇಕು. ಪೂಜೆ ಮಾಡಿದ ಕೂಡಲೇ ಬೇರೆಯವರಿಗೆ ಅವಕಾಶ ಕಲ್ಪಿಸಬೇಕು. ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಅಂತರ ಕಾಪಾಡಿಕೊಂಡು ಸಹಕರಿಸಬೇಕು’ ಎಂದರು.

ಪ್ರಭು ಶೆಟ್ಟರ, ಸಿದ್ದು ರಾಯನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT