ಮಂಗಳವಾರ, ಮಾರ್ಚ್ 21, 2023
25 °C

ಕಬಡ್ಡಿ ಅಂಕಣದಲ್ಲಿ ರೈಡರ್‌ ಆದ ಸಭಾಪತಿ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ದಾಖಲೆ ಗೆಲುವು ಸಾಧಿಸಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕಬಡ್ಡಿ ಅಂಕಣದಲ್ಲೂ ರೈಡರ್‌ ಆಗಿ ಅಂಕ ಗಳಿಸುವ ಮೂಲಕವೂ ಗಮನ ಸೆಳೆದರು.

ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ನೆಹರು ಕಾಲೇಜಿನ ಮೈದಾನದಲ್ಲಿ ಅಮೃತ್ ದೇಸಾಯಿ ಸ್ಪೋರ್ಟ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಹೆಬ್ಬಳ್ಳಿ ಕಬಡ್ಡಿ ಉತ್ಸವಕ್ಕೆ ಸ್ವತಃ ರೈಡರ್‌ ಆಗಿ ಮೈದಾನಕ್ಕೆ ಇಳಿಯುವ ಮೂಲಕ ಚಾಲನೆ ನೀಡಿದರು.

ಸೋಮವಾರ ರಾತ್ರಿ ನಡೆದ ಹೊನಲು ಬೆಳಕಿನ ಪಂದ್ಯಾವಳಿಗೆ ಚಾಲನೆ ನೀಡಲು ಸ್ವತಃ ರೈಡರ್‌ ಆಗಿ ಹೋಗಲು ನಿರ್ಧರಿಸಿ ಚಪ್ಪಲಿ ಕಳೆದು, ಅಂಕಣಕ್ಕೆ ನುಗ್ಗಿದರು. ಯುವಕರನ್ನೂ ನಾಚಿಸುವಂತೆ ಅಂಕಣದಲ್ಲಿ ಓಡಾಡಿದರು. 

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹಾಗೂ ಶಾಸಕ ಅಮೃತ ದೇಸಾಯಿ ಹಾಗೂ ಇತರ ಗಣ್ಯರು ಹೊರಟ್ಟಿ ಅವರ ಉತ್ಸಾಹಕ್ಕೆ ಚಪ್ಪಾಳೆಯ ಮಳೆಗರೆದರು. ನೆರೆದ ಜನ ಇದನ್ನು ಕಣ್ತುಂಬಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು