ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಹಿತರಕ್ಷಣೆಗೆ ಬದ್ಧ

ಶಿಕ್ಷಕರೊಂದಿಗೆ ಸಮಾಲೋಚನಾ ಸಭೆ: ಹೊರಟ್ಟಿ ಭರವಸೆ
Last Updated 11 ಜೂನ್ 2022, 15:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಜಾತಿ, ಮತ, ಪಂಥಗಳನ್ನು ನೋಡದೆ, ಎಲ್ಲಾ ಸಮುದಾಯಗಳ ಹಿತರಕ್ಷಣೆಗೆ ಸದಾಕಾಲ ಬದ್ಧ’ ಎಂದು ವಿಧಾನ ಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

‘ಶಿಕ್ಷಕರೇ ನನ್ನ ಜೀವಾಳ. ಅವರಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ್ದೇನೆ. ಮುಂದೆಯೂ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅನುದಾನರಹಿತ ನೌಕರರಿಗೆ ಸೇವಾ ಭದ್ರತೆ, ವೈದ್ಯಕೀಯ ಸೌಲಭ್ಯ ವಿಸ್ತರಣೆ, ವೈದ್ಯನಾಥನ್ ವರದಿ ಜಾರಿ, ವೇತನ ಸಮಸ್ಯೆ, ಹಳೇ ಪಿಂಚಣಿ ಯೋಜನೆ ಜಾರಿ, ಕಾಲ್ಪನಿಕ ವೇತನ ಕಲ್ಪಿಸುವುದು, ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ದೊರಕಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಹೋರಾಟ ನಡೆಸಿದ್ದೇನೆ’ ಎಂದರು.

ಟಿಪ್ಪು ಶಾಹೀದ್ ಪಾಲಿಟೆಕ್ನಿಕ್‍ನ ಪ್ರಾಧ್ಯಾಪಕ ಅಬ್ದುಲ್‍ಖಾದರ ಮೆಣಸಗಿ ಮಾತನಾಡಿ, ‘ಜಾತ್ಯತೀತ ಮನೋಭಾವದ ಪ್ರತಿನಿಧಿಯನ್ನು ಬೆಂಬಲಿಸಿ, ಶಿಕ್ಷಕ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ’ ಎಂದರು.

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ ಯೂಸೂಫ ಸವಣೂರ, ಕಾರ್ಯದರ್ಶಿ ಎಂ.ಎ. ಪಠಾಣ, ಮಾತನಾಡಿದರು. ಅಬ್ದುಲ್ ರಜಾಕ್ ನಾಯಕ, ನೆಹರೂ ಪದವಿ ಕಾಲೇಜಿನ ಪ್ರಾಚಾರ್ಯ ಪಿರೋಜ್ ಅಹಮ್ಮದ, ಅಯೂಬ್ ಶಿವಳ್ಳಿ, ಜಾಕೊಬ್ ಕುಸುಗಲ್, ಅಬ್ದುಲ್ ರಜಾಕ್ ಅಂಕಲಗಿ, ಸಲೀಂ ಹೆಬ್ಬಳ್ಳಿ, ಮುನ್ನಾ ಮರಕರ, ಇಮ್ತಿಯಾಜ್ ಕುಂಟೋಜಿ ಇದ್ದರು.

ವಸಂತ ಹೊರಟ್ಟಿ ಪ್ರಚಾರ

ಹುಬ್ಬಳ್ಳಿ: ‘42 ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುತ್ತಿರುವ ಬಸವರಾಜ ಹೊರಟ್ಟಿ ಅವರ ಪುನರಾಯ್ಕೆ ಅಗತ್ಯವಾಗಿದೆ’ ಎಂದು ಆಕ್ಸ್‌ಫರ್ಡ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಸಂತ ಹೊರಟ್ಟಿ ಹೇಳಿದರು.

ನಗರದ ಆರ್‌ಎನ್‌ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಶುಕ್ರವಾರ ತಮ್ಮ ತಂದೆ ಬಸವರಾಜ ಹೊರಟ್ಟಿ ಪರ ಮತಯಾಚಿಸಿ, ಮಾತನಾಡಿದರು.

‘ಶಿಕ್ಷಕರ ಧ್ವನಿಯಾಗಿರುವ ಹೊರಟ್ಟಿ ಅವರು, ಶಿಕ್ಷಕರನ್ನೇ ಕುಟುಂಬವೆಂದು ಭಾವಿಸಿದ್ದಾರೆ. 8ನೇ ಸಲ ಆಯ್ಕೆಯಾಗಿ ದಾಖಲೆ ಸಾಧಿಸಲು ಬೆಂಬಲ ನೀಡಬೇಕು. ಅವರ ಸಾಧನೆಯೇ ಶ್ರೀರಕ್ಷೆಯಾಗಲಿದೆ’ ಎಂದರು.

ಎಸ್.ಆರ್. ಬೊಮ್ಮಾಯಿ ರೋಟರಿ ಶಾಲೆ ಹಾಗೂ ಜೈಂಟ್ಸ್‌ ಪ್ರೌಢಶಾಲೆಯಲ್ಲಿ ಪ್ರಚಾರ ಮಾಡಲಾಯಿತು. ಎಸ್.ವಿ. ಪಟ್ಟಣಶೆಟ್ಟಿ, ಎನ್.ಎಫ್. ತುಕ್ಕಣ್ಣವರ, ಗೌತಮ ಜೈನ್, ಎಸ್.ಬಿ. ಹಿರೇಮಠ, ಜೆ.ಎಂ. ಗೋಕಾವಿ, ಸಿರಿಲ್ ಸುಧಾಕರ, ಈಶ್ವರಪ್ಪ, ಸುಬ್ಬರಾವ ಹಾಗೂ ವಿಜಯಾ ದೊಡ್ಡಗೌಡರ ಇದ್ದರು.

ಹಳೇ ಹುಬ್ಬಳ್ಳಿಯಲ್ಲಿ ಮತಯಾಚನೆ: ಪ್ರಭು ನವಗುಂದಮಠ ಅವರ ನೇತೃತ್ವದಲ್ಲಿ ಹಳೇ ಹುಬ್ಬಳ್ಳಿಯ ವಿವಿಧ ಶಾಲೆಗಳಲ್ಲಿ ಬಸವರಾಜ ಹೊರಟ್ಟಿ ಪರ ಪ್ರಚಾರ ಮಾಡಲಾಯಿತು.

ವೀರಭದ್ರಪ್ಪ ಹಾಲಹರವಿ, ಪಾಲಿಕೆ ಸದ್ಯಸರಾದ ರಾಧಾಬಾಯಿ ಸಾಫರೆ, ಶಾಂತಾ ಹಿರೇಮಠ, ಚಂದ್ರಶೇಖರ ಗೋಕಾಕ, ರಂಗಾ ಬದ್ದಿ , ಬಸವರಾಜ ಅಮ್ಮಿನಭಾವಿ, ಸಂತೋಷ್ ಅರಕೇರಿ, ರಾಜಕುಮಾರ ಕಾಮರಡ್ಡಿ, ಮಂಜುನಾಥ ಕಾಟಕರ, ಜಗದೀಶ ಬುಳ್ಳಾನವರ, ಶಿವಯ್ಯಾ ಹಿರೇಮಠ್, ಮಂಜುನಾಥ್ ಚಿತಗಿಂಜಲ, ಲಕ್ಷ್ಮೀಕಾಂತ ಘೋಡಕೆ, ಸಂಜು ಬುಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT