ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಣಚಿ: ಡಿಜಿಟಲ್ ಗ್ರಂಥಾಲಯಕ್ಕೆ ಪುಸ್ತಕ ಕಾಣಿಕೆ

Last Updated 15 ಏಪ್ರಿಲ್ 2022, 2:45 IST
ಅಕ್ಷರ ಗಾತ್ರ

ಅಳ್ನಾವರ: ಸಮೀಪದ ಬೆಣಚಿ ಗ್ರಾಮ ಪಂಚಾಯ್ತಿ ಆವರಣದಲ್ಲಿನ ಡಿಜಿಟಲ್ ಗ್ರಂಥಾಲಯಕ್ಕೆ ಪಿಡಿಒ ಆನಂದ ಕೆಂಚನ್ನವರ ತಮ್ಮ ಸ್ವಂತ ಖರ್ಚಿನಲ್ಲಿ ₹13,000 ಮೌಲ್ಯದ ಪುಸ್ತಕಗಳನ್ನು ಕಾಣಿಕೆ ನೀಡಿದರು.

ಗ್ರಾಮ ಪಂಚಾಯ್ತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ನೀಡಿ ಅವರು ಮಾತನಾಡಿ ‘ಗ್ರಾಮೀಣ ಭಾಗದ ಜನರಿಗೆ ವಿದ್ಯಾರ್ಜರ್ನೆಗೆ ಹಾಗೂ ಜ್ಞಾನದ ಅರಿವು ಮೂಡಿಸಲು ಪುಸ್ತಕ ನೆರವಾಗಲಿವೆ. ಅವುಗಳನ್ನು ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ’ ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ ಕದಂ, ಉಪಾಧ್ಯಕ್ಷ ಗಂಗವ್ವ ಮುಸ್ಟಗಿ, ಮಲ್ಲನಗೌಡ ಪಾಟೀಲ, ಸಂದೀಪ ಪಾಟೀಲ, ಶೈಲಾ ಹಿರೇಮಠ, ಮೀನಾಕ್ಷಿ ಕೆಳ್ಳಿಕೇತರ, ದ್ರಾಕ್ಷಾಯಣಿ ಗೋವೇಕರ, ಯಲ್ಲವ್ವ ನಾಯಕ , ಅಲ್ಲಾಭಕ್ಷ ಬಡಗಿ, ತಾಲ್ಲೂಕ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸ್ಮಿತಾ ಜವಳಿ, ಗ್ರಂಥಪಾಲಕ ರಘು ಹರಿಜನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT