ಕುಂದಗೋಳ: ತಾಲ್ಲೂಕಿನ ಬೆಣ್ಣಿಹಳ್ಳ ಅಗಲೀಕರಣ ಹಾಗೂ ಚೆಕ್ಡ್ಯಾಂ ನಿರ್ಮಾಣಕ್ಕಾಗಿ ₹3 ಸಾವಿರ ಕೋಟಿ ಅನುದಾನವನ್ನು ಅಧಿವೇಶನ ಮುಗಿಯುವುದರೊಳಗಾಗಿ ಬಿಡುಗಡೆ ಮಾಡಬೇಕೆಂದು ಜಿಗಳೂರ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ರ ಸರ್ವಿಸ್ ರಸ್ತೆಯನ್ನು ಗುರುವಾರ ರತ್ನ ಭಾರತ ರೈತ ಸಮಾಜ ಹಾಗೂ ರೈತರು ಕೆಲಕಾಲ ಬಂದ್ ಮಾಡಿ, ಪ್ರತಿಭಟಿಸಿದರು.

ರತ್ನ ಭಾರತ ರೈತ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡ್ರ ಬಸನಗೌಡ್ರ ಮಾತನಾಡಿ, ತಾಲ್ಲೂಕಿನಲ್ಲಿ ಕೈಗೊಳ್ಳಬೇಕಾಗಿರುವ ಬೆಣ್ಣಿಹಳ್ಳ ಕಾಮಗಾರಿಗೆ ಅನುದಾನ ಸಮರ್ಪಕವಾಗಿ ನೀಡಿಲ್ಲ. ಕೂಡಲೆ ಸರ್ಕಾರ ಸ್ಪಂದಿಸಬೇಕು, ಇಲ್ಲವಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಾಜು ಮಾವರಕರ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ದೇವಪ್ಪ ಇಚ್ಚಂಗಿ, ಮಲ್ಲನಗೌಡ ಪಾಟೀಲ, ಬಸವರಾಜ್ ಅಣ್ಣಿಗೇರಿ, ಶ್ರೀಕಂಠಗೌಡ ಹಿರೇಗೌಡ್ರ, ರಾಜು ಮಲ್ಲಿಗವಾಡ, ಚನ್ನಬಸಪ್ಪ ಸಿದ್ದುನವರ, ವಿರುಪಾಕ್ಷ ಕಳ್ಳಿಮನಿ, ಶಂಕರಗೌಡ ಲಿಂಗನಗೌಡರ, ಅಖಿಲಾ ತಿವಾರಿ, ರುದ್ರಣ್ಣ ಬೆಂಗೇರಿ, ಚಿದಾನಂದ ಹರಿಜನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.