ಹುಬ್ಬಳ್ಳಿ: ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವವರೇ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಇಲ್ಲೊಬ್ಬರು ತಮ್ಮ 64ನೇ ವಯಸ್ಸಿನಲ್ಲೂ ಜನರಲ್ಲಿ ಅಧ್ಯಾತ್ಮ ಜ್ಞಾನ ಪಸರಿಸಲು ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ.

ನಗರದ ನಿವಾಸಿ ನಂದಾ ಯಲ್ಲಪ್ಪ ಲದ್ದವಾ ಅವರು ನಾಲ್ಕು ವರ್ಷಗಳಿಂದ ಆನ್ಲೈನ್ ಮೂಲಕ ಭಗವದ್ಗೀತೆ ಸೇರಿದಂತೆ ವಿವಿಧ ಆಧ್ಯಾತ್ಮಿಕ ಗ್ರಂಥಗಳಲ್ಲಿನ ವಿಚಾರಗಳನ್ನು ಉಚಿತವಾಗಿ ಜನರಿಗೆ ಬೋಧಿಸುವಲ್ಲಿ ನಿರತರಾಗಿದ್ದಾರೆ.

ಗೂಗಲ್ ಮೀಟ್ ಹಾಗೂ ಟೆಲಿಗ್ರಾಂ ಆ್ಯಪ್ಗಳಲ್ಲಿ ನಂದಾ ಲದ್ದವಾ ಅವರು ಹಾಗೂ ಸಹಾಯಕಿಯರು ಪ್ರತಿ ದಿನ ಐದು ತಂಡಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ, ಅರ್ಥ ವಿವರಣೆ ನೀಡುತ್ತಿದ್ದಾರೆ. ಸಂಜೆಯ ತರಗತಿಯಲ್ಲಿ ಎಸ್ಎಸ್ಕೆ ಸಮಾಜದ ಕ್ಷಾತ್ರ ಭಾಷೆಯಲ್ಲಿ ವಿವರಣೆ ನೀಡುವುದು ವಿಶೇಷವಾಗಿದೆ.

‘ಮಧ್ಯಾಹ್ನ 12.30ರಿಂದ 1.30, 1.30ರಿಂದ 2.30, ಸಂಜೆ 5ರಿಂದ 6 ಗಂಟೆ, 6.30ರಿಂದ 7.30ರವರೆಗೆ ಒಟ್ಟು ನಾಲ್ಕು ತಂಡಗಳಲ್ಲಿ ಶ್ಲೋಕಾ ಪಠಣ ಹಾಗೂ ಅರ್ಥ ವಿವರಣೆ ನೀಡಲಾತ್ತದೆ. ಸಂಜೆ 5ರಿಂದ 6 ಹಾಗೂ 7 ಗಂಟೆಯಿಂದ 7.45ರವರೆಗೆ ನಡೆಯುವ ತರಗತಿಗಳಲ್ಲಿ ನಾನೇ ಪಾಲ್ಗೊಂಡು, ಬೋಧಿಸುತ್ತೇನೆ. ಚಿಕ್ಕ ಮಕ್ಕಳಿಂದ ಹಿಡಿದು 60 ವರ್ಷ ಮೇಲ್ಪಟ್ಟ 100ಕ್ಕೂ ಹೆಚ್ಚು ಮಂದಿ ವಿವಿಧ ತಂಡಗಳಲ್ಲಿ ಪಾಲ್ಗೊಳ್ಳುತ್ತಾರೆ’ ಎನ್ನುತ್ತಾರೆ ನಂದಾ ಲದ್ದವಾ.

‘ಗದಗ, ಲಕ್ಷ್ಮೇಶ್ವರ, ಮುಂಡರಗಿ, ಹಾವೇರಿ, ರಾಣೆಬೆನ್ನೂರ, ಬೆಂಗಳೂರು, ಧಾರವಾಡ, ದಾವಣಗೆರೆ, ಹರಿಹರ, ಬೆಳಗಾವಿ ಮಾತ್ರವಲ್ಲದೆ ಯುಕೆ, ಸೆಂಟ್ರಲ್ ಅಮೆರಿಕ, ನ್ಯೂಜಿಲೆಂಡ್ನಲ್ಲಿರುವ ಆಸಕ್ತ ಭಾರತೀಯರು ತರಗತಿಗಳಲ್ಲಿ ಭಾಗವಹಿಸುತ್ತಾರೆ. ಭಗವದ್ಗೀತೆಯೊಂದಿಗೆ ದೇವಿ ಪುರಾಣ, ದತ್ತ ಚರಿತೆ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ, ದೇವಿ ಮಹಾತ್ಮೆಯನ್ನೂ ಪಠಿಸಲಾಗುತ್ತದೆ’ ಎಂದರು.

‘ಗ್ರೂಪ್ ಹೆಚ್ಚಳ ಮಾಡುವ ಗುರಿ’ ‘

ಭಗವದ್ಗೀತೆ ಸೇರಿ ಹಿಂದೂ ಧರ್ಮದ ಹಲವು ಗ್ರಂಥಗಳಲ್ಲಿ ಸಾರ್ವಕಾಲಿಕ ಸಮಸ್ಯೆಗಳಿಗೆ ಪರಿಹಾರವಿದೆ. ಇವುಗಳ ಪಠಿಸಿ ಅರ್ಥ ಮಾಡಿಕೊಂಡರೆ ನೆಮ್ಮದಿ ಶಾಂತಿ ಲಭಿಸುತ್ತದೆ’ ಎಂದು ನಂದಾ ಲದ್ದವಾ ತಿಳಿಸಿದರು. ‘ಬಹುತೇಕರಿಗೆ ಬೇರೆಡೆ ಹೋಗಿ ಇವುಗಳನ್ನು ಅಭ್ಯಾಸ ಮಾಡಲಾಗಲ್ಲ. ಇದಕ್ಕೆ ಆನ್ಲೈನ್ ನೆರವಾಗಿದೆ. ಮುಂದಿನ ದಿನಗಳಲ್ಲಿ ಆನ್ಲೈನ್ನಲ್ಲಿ ಆಸಕ್ತರ ಗ್ರೂಪ್ಗಳ ಸಂಖ್ಯೆ ಹೆಚ್ಚಳ ಮಾಡುವ ಗುರಿ ಇದೆ. ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಮಕ್ಕಳಿಗೆ ಇಂತಹ ತರಗತಿ ನಡೆಸಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.