ಬಂದ್ ಮಾಡಿ ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್: ಬಿಜೆಪಿ ತಿರುಗೇಟು

7

ಬಂದ್ ಮಾಡಿ ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್: ಬಿಜೆಪಿ ತಿರುಗೇಟು

Published:
Updated:

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ ಅರ್ಧ ಸತ್ಯ ಹೇಳಿ ಜನರನ್ನು ದಾರಿ ತಪ್ಪಿಸುತ್ತಿದೆ. ಮುಳುಗುತ್ತಿರುವ ದೋಣಿಯಾಗಿರುವ ಕಾಂಗ್ರೆಸ್ ಅನ್ನು ಮೇಲಕ್ಕೆ ಎತ್ತಲು ಆ ಪಕ್ಷದ ಮುಖಂಡರು ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.

67 ವರ್ಷಗಳಲ್ಲಿ 57 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ತೈಲ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವಲ್ಲಿ ವಿಫಲವಾಗಿದೆ. ಒಟ್ಟು ಬೇಡಿಕೆಯ ಶೇ82ರಷ್ಟು ತೈಲವನ್ನು ಈಗಲೂ ಆಮದು ಮಾಡಿಕೊಳ್ಳಲಾಗುತ್ತಿದೆ. ಕಳೆದ 14 ತಿಂಗಳಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ73,44ರಷ್ಟು ಏರಿಕೆಯಾಗಿದೆ, ಆದರೆ ಪೆಟ್ರೋಲ್ ಬೆಲೆ ಶೇ29 ಹಾಗೂ ಡೀಸೆಲ್ ಬೆಲೆ ಶೇ33.83ರಷ್ಟು ಮಾತ್ರ ಹೆಚ್ಚಿಸಲಾಗಿದೆ. ಇದು ಸಹ ಬಿಜೆಪಿಯ ಸಾಧನೆ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಮ. ನಾಗರಾಜ ಸಮರ್ಥಿಸಿಕೊಂಡಿದ್ದಾರೆ.

ಬೆಲೆ ಏರಿಕೆಯಾದಂತೆ ರಾಜ್ಯ ಸರ್ಕಾರಗಳಿಗೆ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಬರುತ್ತದೆಯೇ ವಿನಃ ಕೇಂದ್ರಕ್ಕೆ ಅಲ್ಲ. ಪ್ರತಿ ಲೀಟರ್ ಪೆಟ್ರೋಲ್‌ನಿಂದ ಕೇಂದ್ರ ಸರ್ಕಾರಕ್ಕೆ ₹6.66 ಆದಾಯ ಬಂದರೆ, ರಾಜ್ಯ ಸರ್ಕಾರಕ್ಕೆ ₹25 ಸಿಗುತ್ತಿದೆ. ಆದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

2005–06ರಿಂದ 2009–10ರ ತನಕ ಕಾಂಗ್ರೆಸ್ ತೈಲ ಕಂಪೆನಿಗಳಿಗೆ ಸಬ್ಸಿಡಿ ಮೊತ್ತವನ್ನೇ ಪಾವತಿ ಮಾಡಿರಲಿಲ್ಲ.  ಒಂದೇ ಬಾರಿ ಪಾವತಿ ಮಾಡುವ ಹಾಗೆ ತೈಲ ಬಾಂಡ್ ನೀಡಿತ್ತು. ಆ ಮೊತ್ತ ₹40,226 ಕೋಟಿಯನ್ನು ಈ ಸರ್ಕಾರ ಪಾವತಿಸಿದೆ. ಕೇಂದ್ರೀಯ ಸುಂಕ ಮರುಪಾವತಿ ಮೊತ್ತವನ್ನು ಸಹ ಹಿಂದಿನ ಸರ್ಕಾರ ಪಾವತಿಸಿರಲಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !