ಸ್ನೇಹ, ಸೇವೆಯ ಭಾವಸಾರ ವಿಜನ್

ಹುಬ್ಬಳ್ಳಿ: ‘ಸ್ನೇಹ, ಸೇವೆ ಹಾಗೂ ನಾಯಕತ್ವದ ಉದ್ದೇಶದೊಂದಿಗೆ ಭಾವಸಾರ ವ್ಹಿಜನ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ನಾರಾಯಣರಾವ್ ತಾತುಸ್ಕರ್ ಹೇಳಿದರು.
ಹುಬ್ಬಳ್ಳಿಯ ವಿದ್ಯಾನಗರದ ತಿಮ್ಮಸಾಗರ ಗುಡಿಯ ಹಿಂಭಾಗದಲ್ಲಿರುವ ಭಾವಸಾರ ಹಾಸ್ಟೆಲ್‌ನಲ್ಲಿ ಇತ್ತೀಚೆಗೆ ನಡೆದ ಸಂಸ್ಥೆಯ 2023ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಳೆದ ಇಪ್ಪತ್ತೆರಡು ವರ್ಷಗಳಿಂದ ಆರೋಗ್ಯ, ಶಿಕ್ಷಣ, ಮಹಿಳಾ ಕಲ್ಯಾಣ, ಸ್ವಾವಲಂಬಿಯಾಗಿ ಬದುಕಲು ತರಬೇತಿ, ಮಕ್ಕಳ ಕಲ್ಯಾಣ, ವಿದ್ಯಾರ್ಥಿವೇತನ, ಬಾಲಸಂಸ್ಕಾರ ತರಗತಿಗಳು, ಅನ್ನದಾನ ಕಾರ್ಯಕ್ರಮ, ವಧು-ವರರ ಸಮಾವೇಶ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಸಂಸ್ಥೆ ಮಾಡುತ್ತಾ ಬಂದಿದೆ’ ಎಂದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ರಮೇಶ ಧಾರಜಕರ, ದಯಾನಂದ ಅಂಬರಕರ್ ಹಾಗೂ ಜಗದೀಶ ಹಂಚಾಟೆ ಉಪಾಧ್ಯಕ್ಷರಾಗಿ, ಅನಂತ ಸುಲಾಖೆ ಕಾರ್ಯದರ್ಶಿಯಾಗಿ, ಮಹಿಳಾ ಕಲ್ಯಾಣ ನಿರ್ದೇಶಕಿಯಾಗಿ ಲೀಲಾತಾಯಿ ಸುತ್ರಾವೆ, ಸ್ನೇಹಾ ಬೇಧರೆ ಹಾಗೂ ಇತರ ಪದಾಧಿಕಾರಿಗಳಿಗೆ ಸಂಸ್ಥೆಯ ಏರಿಯಾ–101ರ ಗವರ್ನರ್ ಪ್ರದೀಪ ಗುಜ್ಜರ್ ಪ್ರತಿಜ್ಞಾವಿಧಿ ಭೋಧಿಸಿದರು.
ಮುಖ್ಯ ಅತಿಥಿ ಸಂಸ್ಥೆಯ ರಾಷ್ಟ್ರೀಯ ಮಾಜಿ ಅಧ್ಯಕ್ಷೆ ಜಯಶ್ರೀ ತಾತುಸ್ಕರ್ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಿದ್ದು ಮಾಲಡ್ಕರ, ಕೆ.ಜಿ. ಟಿಕಾರೆ, ಡಾ. ಬಿ.ಐ. ಮಿರಜಕರ, ಸುರೇಶ ಕಪಟಕರ, ಪ್ರಕಾಶ್ ತಿರುಮಲ್ಲೆ, ವಿಜಯಕುಮಾರ್ ಲಾಂಡೆ, ದೀಪಕ್ ಮಾತಾಡೆ, ಅಶೋಕ ಮಹೀಂದ್ರಕರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.