ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭುವನೇಶ್ವರಿ ಜ್ಯುವೆಲರ್ಸ್‌ ಕಳವು ಪ್ರಕರಣ: ₹77 ಲಕ್ಷ ಮೌಲ್ಯದ ಆಭರಣ ವಶ

Published 5 ಸೆಪ್ಟೆಂಬರ್ 2024, 13:36 IST
Last Updated 5 ಸೆಪ್ಟೆಂಬರ್ 2024, 13:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಲ್ಲಿನ ಕೇಶ್ವಾಪುರದ ಭುವನೇಶ್ವರಿ ಜ್ಯುವೆಲರ್ಸ್ ಮಳಿಗೆಯಲ್ಲಿ ಜುಲೈ 16ರಂದು ನಡೆದಿದ್ದ ಕಳವು ಪ್ರಕರಣ ಸಂಬಂಧ ಐವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟಾರೆ ₹77 ಲಕ್ಷ ಮೌಲ್ಯದ ಆಭರಣ, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್‌ ಎನ್. ಶಶಿಕುಮಾರ್ ತಿಳಿಸಿದರು.

ಕೇಶ್ವಾಪುರ ಪೊಲೀಸ್‌ ಠಾಣೆಯ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂಬೈ ಮೂಲದ ಫರ್ಹಾನ್ ಶೇಖ್, ಮುಖೇಶ್ ಅಲಿಯಾಸ್‌ ರಾಜು ಯಾದವ್, ಅಫ್ತಾಖ್‌ ಅಹಮ್ಮದ್ ಶೇಖ್, ಫಾತಿಮಾ ಶೇಖ್, ತಲತ್ ಶೇಖ್ ಬಂಧಿತರು. ಪರಾರಿಯಾಗಿರುವ ಪ್ರಮುಖ ಆರೋಪಿ ಸೇರಿದಂತೆ ಮೂವರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ’ ಎಂದರು. 

‘ಬಂಧಿತ ಆರೋಪಿಗಳಿಂದ ₹55 ಲಕ್ಷ ಮೌಲ್ಯದ 780 ಗ್ರಾಂ ಚಿನ್ನಾಭರಣ, ₹17 ಲಕ್ಷ ಮೌಲ್ಯದ 23.3 ಕೆ.ಜಿ. ಬೆಳ್ಳಿ ಆಭರಣ, ₹10,000 ನಗದು, ಕೃತ್ಯಕ್ಕೆ ಬಳಸಿದ ₹5 ಲಕ್ಷ ಮೌಲ್ಯದ ಕಾರು ಹಾಗೂ ಗ್ಯಾಸ್ ಕಟರ್‌ ವಶಪಡಿಸಿಕೊಳ್ಳಲಾಗಿದೆ. ಇನ್ನಷ್ಟು ಪತ್ತೆಯಾಗಬೇಕಿದೆ’ ಎಂದರು.

ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಎಸಿಪಿಗಳಾದ ಚಿಕ್ಕಮಠ, ಶಿವಪ್ರಕಾಶ್ ನಾಯ್ಕ್, ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್ ಕೆ‌‌.ಎಸ್. ಹಟ್ಟಿ, ಗೋಕುಲ್ ರೋಡ್ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರ, ಕಮರಿಪೇಟ ಇನ್‌ಸ್ಪೆಕ್ಟರ್ ಮಹಾಂತೇಶ ಹೂಳಿ ಹಾಗೂ ಸಿಬ್ಬಂದಿ ಇದ್ದರು‌. 

ಜುಲೈ 26ರಂದು ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳುವಾಗ ಆರೋಪಿ ಫರ್ಹಾನ್ ಶೇಖ್ ಮೇಲೆ ಗುಂಡು ಹಾರಿಸಲಾಗಿತ್ತು.

Quote - ಆಭರಣದ ಅಂಗಡಿ ಹಾಗೂ ಗಿರವಿ ಮಳಿಗೆಗಳಲ್ಲಿ ಭದ್ರತಾ ಸಿಬ್ಬಂದಿ ನೇಮಕ ಅಲರ್ಟ್‌ ವ್ಯವಸ್ಥೆ ಸೇರಿದಂತೆ ಅಗತ್ಯ ಸುರಕ್ಷತೆ ಮಾಡಿಕೊಳ್ಳಬೇಕು ಎನ್. ಶಶಿಕುಮಾರ್ ಹು-ಧಾ ಪೊಲೀಸ್ ಕಮಿಷನರ್‌

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT