ಬಿಜೆಪಿ ಎಸ್‌ಸಿ, ಎಸ್‌ಟಿ. ಮೋರ್ಚಾ ಸಮಾವೇಶ ಏ. 15ರಂದು

ಶನಿವಾರ, ಏಪ್ರಿಲ್ 20, 2019
29 °C

ಬಿಜೆಪಿ ಎಸ್‌ಸಿ, ಎಸ್‌ಟಿ. ಮೋರ್ಚಾ ಸಮಾವೇಶ ಏ. 15ರಂದು

Published:
Updated:

ಹುಬ್ಬಳ್ಳಿ: ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಬಿಜೆಪಿ ಎಸ್‌ಸಿ, ಎಸ್‌ಟಿ ಮೋರ್ಚಾ ಸಮಾವೇಶ ಏ. 15ರಂದು ಬೆಳಿಗ್ಗೆ 11 ಗಂಟೆಗೆ ಗೋಕುಲ ಗಾರ್ಡನ್‌ನಲ್ಲಿ ಜರುಗಲಿದೆ ಎಂದು ಪಕ್ಷದ ರಾಷ್ಟ್ರೀಯ ಎಸ್‌ಸಿ, ಎಸ್‌ಟಿ ಮೋರ್ಚಾ ಸಮಿತಿಯ ಸದಸ್ಯ ವೀರಭದ್ರಪ್ಪ ಹಾಲಹರವಿ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಸಮಾವೇಶದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಪರ ಪ್ರಚಾರ ಮಾಡಲಾಗುವುದು. ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಕೋರಲಾಗುವುದು. ಜಿಲ್ಲೆ, ತಾಲ್ಲೂಕಿನ ಎಸ್‌ಸಿ, ಎಸ್‌ಟಿ. ಮೋರ್ಚಾದ ಎಲ್ಲ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

‘ಶಾಸಕರಾದ ಗೋವಿಂದ ಕಾರಜೋಳ, ಪಿ. ರಾಜು, ಶಿವನಗೌಡ ನಾಯಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಲ್ಲಿ ತಂಡಗಳನ್ನು ರಚಿಸಿಕೊಂಡು ಹೆಚ್ಚಿನ ಪ್ರಚಾರ ಮಾಡಲಾಗುತ್ತಿದೆ’ ಎಂದು ಹೇಳಿದರು.

ಮುಖಂಡರಾದ ಅರುಣ ಹುದ್ದಲಿ, ಲಕ್ಷ್ಮಣ ಬೀಳಗಿ, ನಾಗರಾಜ ಟಗರಗುಂಟಿ, ರೇಣುಕಪ್ಪ ಕೇಲೂರ, ವೆಂಕಟೇಶ ಹುಬ್ಬಳ್ಳಿ, ರಂಗನಾಯಕ ತಪೇಲಾ, ಅಶೋಕ ವಾಲ್ಮೀಕಿ, ಚಂದ್ರಶೇಖರ ಗೋಕಾಕ್, ಮಹೇಂದ್ರ ಕೌತಾಳ, ದತ್ತಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !