ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ರಸ್ತೆ ಪಕ್ಕಕ್ಕೆ ವಾಲಿದ ಬಸ್: ಪ್ರಯಾಣಿಕರು ಪಾರು

Last Updated 3 ಡಿಸೆಂಬರ್ 2022, 5:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಮೊರಾರ್ಜಿ ನಗರದ ಸಮೀಪದ ಮಾರುತಿ ದೇವಸ್ಥಾನದ ಬಳಿ ಶುಕ್ರವಾರ ಬ್ರೇಕ್ ವೈಫಲ್ಯದಿಂದಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ರಸ್ತೆ ಬದಿಗೆ ವಾಲಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸಿಬಿಟಿಯಿಂದ ಹೊರಟ್ಟಿದ್ದ ಬಸ್‌ ಲೋಹಿಯಾ ನಗರಕ್ಕೆ ಬರುತ್ತಿದ್ದಂತೆ ಬಸ್‌ನ ಬ್ರೇಕ್ ವೈಫಲ್ಯಗೊಂಡಿದೆ. ಚಾಲಕನ ನಿಯಂತ್ರಣಕ್ಕೆ ಸಿಗದ ಬಸ್ ಹಿಮ್ಮುಖವಾಗಿ, ರಸ್ತೆ ಪಕ್ಕದ ಕುರುಚಲು ಗಿಡಗಳತ್ತ ವಾಲಿಕೊಂಡಿದೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ.

ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿ ಕಳಿಸಲಾಯಿತು. ನಂತರ, ಸ್ಥಳಕ್ಕೆ ಟೋಯಿಂಗ್ ವಾಹನ ಕರೆಸಿ ಬಸ್‌ ಅನ್ನು ಮೇಲಕ್ಕೆತ್ತಿ ಸಾರಿಗೆ ಸಂಸ್ಥೆಯ ಕಾರ್ಯಾಗಾರಕ್ಕೆ ಕಳಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ಮೊರಾರ್ಜಿ ನಗರದ ರಸ್ತೆಯು ಏರಿಳಿತದಿಂದ ಕೂಡಿದೆ. ಈ ಮಾರ್ಗದಲ್ಲಿ ಹಳೆಯ ಬಸ್‌ಗಳ ಬದಲಿಗೆ, ಉತ್ತಮ ಸ್ಥಿತಿಯಲ್ಲಿರುವ ಬಸ್‌ಗಳನ್ನು ನಿಯೋಜಿಸಬೇಕು. ಇಲ್ಲದಿದ್ದರೆ, ಬ್ರೇಕ್‌ ವೈಫಲ್ಯದಂತಹ ಘಟನೆಗಳು ನಡೆಯು
ತ್ತಲೇ ಇರುತ್ತವೆ. ಈ ಬಗ್ಗೆ, ಸಂಬಂಧಪಟ್ಟವರಿಗೆ ಪತ್ರ ಬರೆದು ಒತ್ತಾಯಿಸಿದರೂ ಸ್ಪಂದಿಸಿಲ್ಲ ಎಂದು ಮೊರಾರ್ಜಿ ನಗರ ಅಭಿವೃದ್ಧಿ ಸಂಘದ ಎನ್‌.ಕೆ. ದಲಭಂಜನ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT