ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ಅ.20ಕ್ಕೆ ವೀರಶೈವ ವಧು–ವರರ ಸಮಾವೇಶ

Last Updated 15 ಅಕ್ಟೋಬರ್ 2019, 13:07 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ಮತ್ತು ಕರ್ನಾಟಕ ವೀರಶೈವ ವಧು–ವರರ ಅನ್ವೇಷಣಾ ಕೇಂದ್ರದ ಸಹಯೋಗದಲ್ಲಿ ಅ. 20ರಂದು ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಹಾಗೂ ಜಂಗಮ ವಧು–ವರರ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರವಿ ಹಂದಿಗೋಳ ಹೇಳಿದರು.

ದಾವಣಗೆರೆಯ ಜೆ.ಪಿ. ಫಂಕ್ಷನ್ ಹಾಲ್‌ನಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಸಮಾವೇಶ ಜರುಗಲಿದ್ದು, ವಧು–ವರರ ಪರಿಚಯ ಮತ್ತು ಪಾಲಕರ ಮಾತುಕತೆಗೆ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶದಲ್ಲಿ ವೀರಶೈವ ಲಿಂಗಾಯತ, ಜಂಗಮ, ಆರಾಧ್ಯರು, ಪಂಚಮಸಾಲಿ, ಬಣಜಿಗ, ಆದಿ ಬಣಜಿಗ, ಬಣಗಾರರು, ಶಿವಾಚಾರ್ಯ, ಕುಂಬಾರ, ಪಟ್ಟಸಾಲಿ, ಶಿವಸಿಂಪಿ, ಸಾದರು, ಗಾಣಿಗೇರ, ಮಡಿವಾಳರು, ಹಡಪದ, ನಾಮದ ರೆಡ್ಡಿ, ಲಿಂಗಾಯತ ರೆಡ್ಡಿ, ನೊಳಂಬ, ನೇಕಾರ, ಪಂಚಾಚಾರ್ಯ, ಹೂಗಾರ ಸೇರಿದಂತೆ ವಿವಿಧ ಒಳ ಪಂಗಡಗಳ ವಧು–ವರರು ಭಾಗವಹಿಸಲಿದ್ದಾರೆ. ಆಕಸ್ತರು ತಮ್ಮ ವೈಯಕ್ತಿಕ ಮಾಹಿತಿ ಹಾಗೂ ಭಾವಚಿತ್ರ ತರಬೇಕು. ವಿಧವೆಯರು ಹಾಗೂ ವಿಧುರರು ಕೂಡ ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ಹೇಳಿದರು.

ಕರ್ನಾಟಕ ವೀರಶೈವ ವಧು–ವರರ ಅನ್ವೇಷಣಾ ಕೇಂದ್ರದ ಶಿವಕುಮಾರ ಹಿರೇಮಠ ಹಾಗೂ ಶಕುಂತಲಾ ನಂದಿಮಠ ಇದ್ದರು. ಮಾಹಿತಿಗೆ 72041 39739, 96631 08606.

ಹುಬ್ಬಳ್ಳಿಯಲ್ಲಿ ಅ.20ಕ್ಕೆ ವಧು–ವರರ, ಪಾಲಕರ ಪರಿಚಯ ಸಮಾವೇಶ

ಹುಬ್ಬಳ್ಳಿ: ಗುರು ಅಸೋಸಿಯೇಟ್ಸ್ ವಧು–ವರರ ಮಾಹಿತಿ ಹಾಗೂ ಸೇವಾ ಕೇಂದ್ರವು ಅ. 20ರಂದು ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ಮತ್ತು ಎಲ್ಲಾ ಒಳ ಪಂಗಡಗಳ ವಧು–ವರರ ಹಾಗೂ ಪಾಲಕರ ರಾಜ್ಯಮಟ್ಟದ ಪರಿಚಯ ಸಮಾವೇಶವನ್ನು ಆಯೋಜಿಸಿದೆ ಎಂದು ಗುರು ಅಸೋಸಿಯೇಟ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ದುಂಡಪ್ಪನವರ ಹೇಳಿದರು.

ಕೆ.ಸಿ.ಸಿ ಬ್ಯಾಂಕ್ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಸಮಾವೇಶ ಆರಂಭಗೊಳ್ಳಲಿದೆ. ನೋಂದಣಿ ಶುಲ್ಕ ₹500 ಇದ್ದು, ಸ್ಥಳದಲ್ಲೇ ಪಾವತಿಸಿ ಭಾಗವಹಿಸಬಹುದಾಗಿದೆ. ಮಧ್ಯಾಹ್ನ 1ರಿಂದ 4ರವರೆಗೆ ಎರಡನೇ ಸಂಬಂಧಕ್ಕಗಿ ವಿಧವೆಯವರು, ವಿಧುರರು ಹಾಗೂ ವಿಚ್ಛೇದಿತರ ಪರಿಚಯ ಕಾರ್ಯಕ್ರಮ ಜರುಗಲಿದ್ದು, ಪ್ರವೇಶ ಉಚಿತವಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿರಾಜ್ ದೇಸಾಯಿ ಇದ್ದರು. ಹೆಚ್ಚಿನ ಮಾಹಿತಿಗೆ ಮೊ: 73494 51628, 97397 04309.

ಉಚಿತ ಆಪ್ತ ಸಮಾಲೋಚನೆ

ಹುಬ್ಬಳ್ಳಿ: ‘ಮಹಿಷಿ ಟ್ರಸ್ಟ್‌ ವತಿಯಿಂದ ಧಾರವಾಡದ ಕೆಲಗೇರಿ ರಸ್ತೆಯಲ್ಲಿರುವ ಬನಶಂಕರಿ ಕಲ್ಯಾಣಮಂಟಪದಲ್ಲಿ ಪ್ರತಿ ಗುರುವಾರ ಸಂಜೆ 5ರಿಂದ 7 ಗಂಟೆವರೆಗೆ ಉಚಿತವಾಗಿ ಆಪ್ತ ಸಮಾಲೋಚನೆ ನಡೆಯಲಿದೆ’ ಎಂದು ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸಾವಿತ್ರಿ ಮಹಿಷಿ ಹೇಳಿದರು.

‘ಬೆಂಗಳೂರಿನ ‘ಸಮಾಧಾನ’ ಕೇಂದ್ರದ ಡಾ.ಸಿ.ಆರ್. ಚಂದ್ರಶೇಖರ್ ಹಾಗೂ ಅವರ ತಂಡದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದಿರುವರು ಆಪ್ತ ಸಮಾಲೋಚನೆ ನಡೆಸಲಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಉದ್ಯೋಗಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಗೃಹಿಣಿಯರು, ಪುರುಷರು, ಯುವಕ–ಯುವತಿಯರು ಆಪ್ತ ಸಮಾಲೋಚನೆಯ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 94825 20874, 82770 33139, 98800 19258 ಸಂಪರ್ಕಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT