ಮಂಗಳವಾರ, ಸೆಪ್ಟೆಂಬರ್ 22, 2020
20 °C

ಶ್ರೀನಿವಾಸ ಜೋಶಿಗೆ ‘‘ಬಕ್ಲರ್ಸ್‌ ಆಸ್ಕರ್‌’ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಅಕ್ಷಿಪಟಲ ತಜ್ಞ ಶ್ರೀನಿವಾಸ ಎಂ. ಜೋಶಿ ಅವರಿಗೆ ಅಮೆರಿಕದ ‘ರೈಟ್‌ ಬಕ್ಲರ್ಸ್‌ ಆಸ್ಕರ್‌’ ಪ್ರಶಸ್ತಿ ಲಭಿಸಿದೆ.

ಷಿಕಾಗೊದಲ್ಲಿ ಇತ್ತೀಚಿಗೆ ನಡೆದ ಅಕ್ಷಿಪಟಲ ತಜ್ಞರ 37ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಶ್ರೀನಿವಾಸ ಅವರು ಮಧುಮೇಹದಿಂದ ಅಕ್ಷಿಪಟಲದಲ್ಲಿ ಅತಿ ವೇಗವಾಗಿ ಬೆಳೆಯುವ ಮೆಂಬರೇನ್‌, ಅಕ್ಷಿಪಟಲದ ಚದುರುವಿಕೆ ನಿವಾರಿಸುವ ಕುರಿತು ಹಾಗೂ ಅದನ್ನು ತಡೆಗಟ್ಟಲು ಇರುವ ಹೊಸ ತಂತ್ರಜ್ಞಾನಗಳ ಬಗ್ಗೆ  ವಿಧಾನದ ವಿಡಿಯೊ ಪ್ರದರ್ಶಿಸಿದ್ದರು. ಸಮ್ಮೇಳನದಲ್ಲಿ 3,000ಕ್ಕೂ ಹೆಚ್ಚು ಖ್ಯಾತ ಅಕ್ಷಿಪಟಲ ತಜ್ಞರು, ಶಸ್ತ್ರಚಿಕಿತ್ಸಕರು ಪಾಲ್ಗೊಂಡಿದ್ದರು.

ಅವರು ಮಂಡಿಸಿದ ವಿಡಿಯೊವನ್ನು 20 ಹಿರಿಯ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿ ಶಸ್ತ್ರಚಿಕಿತ್ಸೆಗೆ ಅತ್ಯುತ್ತಮ ಮಂಡನೆ ಎಂದು ತೀರ್ಮಾನಿಸಿ ಬಕ್ಲರ್ಸ್ ಆಸ್ಕರ್ ಗೌರವ ನೀಡಿದ್ದಾರೆ.

ಈ ಪ್ರಶಸ್ತಿಯು ಸುಮಾರು ಎಂಟು ಪೌಂಡಿನ ಚಿನ್ನದ ಪ್ಲೇಟೆಡ್‌ನ ಮೂರ್ತಿ ಒಳಗೊಂಡಿದೆ. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗಳನ್ನು ತಯಾರಿಸುವ ಆರ್‌.ಎಸ್‌. ಓವೆನ್ಸ್‌ ಕಂಪನಿ ಬಕ್ಲರ್ಸ್‌ ಆಸ್ಕರ್‌ ಟ್ರೋಫಿ ನಿರ್ಮಾಣ ಮಾಡುತ್ತದೆ.

ಎಂ.ಎಂ. ಜೋಶಿ ಆಸ್ಪತ್ರೆಯ ವೈದ್ಯ ಎ.ಎಸ್‌. ಗುರುಪ್ರಸಾದ್ 2016ರಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು. ಶ್ರೀನಿವಾಸ ಜೋಶಿ 2017 ಮತ್ತು 2018ರಲ್ಲಿಯೂ ಈ ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.