ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಣ್ಣಿಗೇರಿ | ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್

ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಭರವಸೆ
Published : 15 ಸೆಪ್ಟೆಂಬರ್ 2024, 15:38 IST
Last Updated : 15 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ಅಣ್ಣಿಗೇರಿ: ಮಳೆ, ಗಾಳಿ ಮತ್ತು ಚಳಿಯನ್ನದೇ ಪ್ರತಿನಿತ್ಯ ಮನೆ, ಮನೆಗೆ ತೆರಳಿ ಪತ್ರಿಕೆ ವಿತರಣೆ ಮಾಡುತ್ತಿರುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ. ಸರ್ಕಾರ ಇಂತಹ ವಿತರಕರನ್ನು ಕಾರ್ಮಿಕ ಇಲಾಖೆಗೆ ಒಳಪಡಿಸಿ ಸರ್ಕಾರದ ಸೌಲಭ್ಯ ಒದಗಿಸುವಲ್ಲಿ ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ಅವರು ಸ್ಥಳೀಯ ಪತ್ರಿಕಾ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾ ವಿತರಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ನಸುಕಿನಲ್ಲಿ ಎದ್ದು ಮನೆ, ಮನೆಗೆ ಪತ್ರಿಕೆ ಹಂಚುತ್ತಿರುವ ಪತ್ರಿಕಾ ವಿತರಕರ ಆರೋಗ್ಯ ಸುಸ್ಥಿರವಾಗಿರುತ್ತದೆ. ಇಂತಹ ವಿತರಕರಿಗೆ ನಾವೆಲ್ಲರೂ ಗೌರವ ಕೊಡಬೇಕಾಗಿದೆ. ಪತ್ರಿಕೆ ಹಂಚುವವುದರ ಮೂಲಕ ಜ್ಞಾನದ ಬುತ್ತಿಯನ್ನು ಮನೆ-ಮೆನೆಗೆ ಹಂಚುತ್ತಿರುವ ವಿತರಕರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಪತ್ರಿಕಾ ವಿತರಕರ ಸೇವೆ ಸಮಾಜದಲ್ಲಿ ಅತ್ಯಂತ ಮಹತ್ವಪೂರ್ಣದ್ದಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಬಸವರಾಜ ಕುಬಸದ ಮಾತನಾಡಿ, ಪತ್ರಿಕೆ ಹಾಕಿಸಿಕೊಳ್ಳುವವರು ಆದಷ್ಟು ಬೇಗನೆ ತಿಂಗಳ ಕೊನೆಯಲ್ಲಿ ಪತ್ರಿಕೆ ಬಿಲ್ ಮೊತ್ತವನ್ನು ನೀಡುವ ಮೂಲಕ ಗೌರವಿಸಬೇಕಾಗಿದೆ ಎಂದರು.

ಪುರಸಭೆಗೆ ನಾಮನಿರ್ದೇಶಗೊಂಡ ಸದಸ್ಯರಾದ ಮಾರುತಿ ಕಾಳಿ ಹಾಗೂ ವೀರನಾರಾಯಣ (ಕಿಟ್ಟು) ಬೆಂತೂರ ಅವರನ್ನು ಗೌರವಿಸಲಾಯಿತು. 

ಪುರಸಭೆ ಅಧ್ಯಕ್ಷೆ ಮೆಹಬೂಬಿ ನವಲಗುಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಐ.ಜಿ.ಸಮುದ್ರಿ, ಅರುಣಕುಮಾರ ಹೂಗಾರ, ಈರಪ್ಪ ಗುರಿಕಾರ, ಹುಸೇನಸಾಬ ಬೆಟಗೇರಿ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT