ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ವಲಸಿಗರನ್ನು ಹೊರಹಾಕಲು ಸಿಎಎ: ಶೆಟ್ಟರ್‌

Last Updated 27 ಜನವರಿ 2020, 11:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಭಾರತದಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶಿಗರಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಅವರನ್ನು ಹೊರಹಾಕಲು ಪೌರತ್ವ(ತಿದ್ದುಪಡಿ) ಕಾಯ್ದೆ ತರಲಾಗಿದೆ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತ ರಕ್ಷಣಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ರಾಯಣ್ಣ ಹುತಾತ್ಮ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಾರ, ಹದಿನೈದು ದಿನದ ಮಟ್ಟಿಗೆ ವಿಸಾ ಪಡೆದು ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನದಿಂದ ಬಂದವರು ಶಾಶ್ವತವಾಗಿ ಇಲ್ಲಿಯೇ ನೆಲೆಸಿದ್ದಾರೆ. ಕಾನೂನು ಬಾಹಿರ ಕೃತ್ಯದಲ್ಲಿ ಭಾಗವಹಿಸುವ ಮೂಲಕ, ಅಶಾಂತಿ ಸೃಷ್ಟಿಸುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ’ ಎಂದರು.

‘ವಿದೇಶಗಳಿಗೆ ವಿಸಾ ಪಡೆದು ಹೋದರೆ ನಿಗದಿತ ದಿನದೊಳಗೆ ಮರಳಿ ಬರಬೇಕು. ಇಲ್ಲದಿದ್ದರೆ ಅಲ್ಲಿಯ ಕಾನೂನು ಕುಣಿಕೆಯಲ್ಲಿ ಸಿಲುಕಿ ನರಳಾಡಬೇಕಾಗುತ್ತದೆ. ಅಲ್ಲಿಯ ಕಠಿಣ ಕಾನೂನು ನಮ್ಮಲ್ಲೂ ಜಾರಿಯಾಗಬೇಕು. ಅಂತಹ ಬದ್ಧತೆ ನಮ್ಮವರಿಗೂ ಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಪೌರತ್ವ ಇಲ್ಲದೆ, ಅಕ್ರಮವಾಗಿ ನೆಲೆಸಿರುವವರು ಆತಂಕ ಪಡೆಬೇಕೇ ಹೊರತು, ಪೌರತ್ವ ಪಡೆದವರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಯಾರದ್ದೋ ಕುಮ್ಮಕ್ಕಿಗೆ ಹಾಗೂ ಸ್ವಾರ್ಥಕ್ಕೆ ಪ್ರತಿಭಟನೆ ಮಾಡುವುದು ಸರಿಯಲ್ಲ. ಪ್ರತಿಭಟನೆ ಕೈ ಬಿಟ್ಟು ಕಾಯ್ದೆಯ ತಿರುಳು ಏನೆಂದು ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಯಣ್ಣ ಸಮಿತಿ ವತಿಯಿಂದ ರಾಯಣ್ಣ ಹುತಾತ್ಮ ದಿನಾಚರಣೆ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ. ದಿಟ್ಟ ನಾಯಕರ ಸ್ಮರಣೆ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದರು.

ಮಲ್ಲಕಂಬ ಪ್ರದರ್ಶನ: ನವನಗರದ ರೋಟರಿ ಸ್ಕೂಲ್‌ನ ವಿದ್ಯಾರ್ಥಿಗಳು ಹಗ್ಗದ ಮೇಲೆ ಯೋಗಾಸನ ಹಾಗೂ ಮಲ್ಲಕಂಬ ಪ್ರದರ್ಶಿಸಿದರು. ಕ್ರೇನ್ ಸಹಾಯಕದಿಂದ 40 ಅಡಿ ಎತ್ತರದಲ್ಲಿ ಹಗ್ಗದ ಮೇಲೆ ಯೋಗ ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ನಟ ಶಿವಚಂದ್ರ ಕುಮಾರ, ನಟಿ ಆರಾಧ್ಯಾ, ನಿರ್ಮಾಪಕ‌ ಶಿವರಾಜ ದೇಸಾಯಿ, ಡಾ. ಪ್ರಭು ಬಿರಾದಾರ, ಮಲ್ಲಿಕಾರ್ಜುನ ಸಾವುಕಾರ, ಸಂದೀಪ ಬೂದಿಹಾಳ, ಮಲ್ಲಪ್ಪ ಪೂಜಾರ, ಮುತ್ತಪ್ಪ ಲಮಾಣಿ, ಸಿದ್ಧಾರೂಢ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT