ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಕ್ಯಾನ್ಸರ್ ದಿನ; ವಿವಿಧೆಡೆ ಜಾಗೃತಿ ಕಾರ್ಯಕ್ರಮ

ಕಿಮ್ಸ್‌ನಲ್ಲಿ ಸೌಲಭ್ಯ ಮೇಲ್ದರ್ಜೆಗೇರಿಸಲು ಒತ್ತು: ರಾಮಲಿಂಗಪ್ಪ
Last Updated 6 ಫೆಬ್ರುವರಿ 2022, 5:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿವಿಧೆಡೆ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಶಿಕ್ಷಣ ಮಹಾವಿದ್ಯಾಲಯ ಯೂತ್ ರೆಡ್ ಕ್ರಾಸ್ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಂಸ್ಥಾಪಕ ಹೆನ್ರಿ ಡುನಾಂಟ್ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ನವನಗರ ಕ್ಯಾನ್ಸರ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ ’ಎಲ್ಲಾ ಕಾಯಿಲೆಗಳಂತೆ ಕ್ಯಾನ್ಸರ್ ಕೂಡ ಒಂದು. ಪ್ರಮುಖವಾಗಿ ಈ ರೋಗ ಬರಲು ತಂಬಾಕು ಕಾರಣ. ಮದ್ಯಪಾನ, ಇಂದಿನ ಕೆಟ್ಟ ಆಹಾರ ಪದ್ಧತಿ ಮತ್ತು ಕ್ಯಾನ್ಸರ್‌ ಬಗ್ಗೆ ಇರುವ ತಪ್ಪು ತಿಳಿವಳಿಕೆ ರೋಗ ಹೆಚ್ಚಾಗಲು ಕಾರಣವಾಗುತ್ತಿದೆ’ ಎಂದರು.

ಕ್ಯಾನ್ಸರ್‌ ತಜ್ಞ ಡಾ. ಉಮೇಶ್ ಹಳ್ಳಿಕೇರಿ ’ತಂಬಾಕು ಜೀವನವನ್ನು ಕೊಲ್ಲುತ್ತದೆ’ ಎಂದರು.

ಡಾ. ಎನ್. ಡಿ. ಶೇಖ್, ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕ ಡಾ. ಜಿ.ಎಂ.ಸುಣಗಾರ, ಪ್ರಾಧ್ಯಾಪಕರಾದ ಡಾ. ಆರ್.ಎಸ್. ಪಾಟೀಲ, ಡಾ. ಪಿ.ಎಸ್. ಹೆಗಡೆ, ಡಾ. ಎ.ಜೆ. ಪಾಟೀಲ, ಡಾ.ಜೆ.ಸಿ. ಹಿರೇಮಠ, ಡಾ. ಎಂ.ಪಿ.ಚಳಗೇರಿ, ಡಾ. ಎಚ್.ಆರ್. ಕುರಿ ಪಾಲ್ಗೊಂಡಿದ್ದರು.

ಅಂತರ ಮುಚ್ಚಿಹಾಕಬೇಕು: ಒಬ್ಬ ವ್ಯಕ್ತಿ ಸಿಗರೇಟ್‌ ಸೇವನೆ ಮಾಡುವುದರಿಂದ ಸುಮಾರು ನಾಲ್ಕು ಸಾವಿರ ವಿಷಕಾರಿ ಅನಿಲ ಹೊರಹಾಕುತ್ತಾನೆ. ಇದು ಅಪಾಯಕಾರಿ ಎಂದು ಕ್ಯಾನ್ಸರ್‌ ತಜ್ಞ ಉಮೇಶ ಹಳ್ಳಿಕೇರಿ ಹೇಳಿದರು.

ಎಸ್‌.ಜೆ.ಎಂ.ವಿ.ಎಸ್‌. ಕಲಾ ಹಾಗೂ ವಾಣಿಜ್ಯ ಕಾಲೇಜು, ಹುಬ್ಬಳ್ಳಿ ಐಕ್ಯೂಎಸಿ, ಎನ್‌ಎಸ್‌ಎಸ್‌, ಯೂತ್‌ ರೆಡ್‌ ಕ್ರಾಸ್ ಮತ್ತು ಆರೋಗ್ಯ ಘಟಕಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರ್‌.ಬಿ. ಪಾಟೀಲ ಕ್ಯಾನ್ಸರ್‌ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ, ಪ್ರಾಚಾರ್ಯ ಡಾ. ಲಿಂಗರಾಜ ಅಂಗಡಿ, ಡಾ. ಸಿಸಿಲಿಯಾ ಡಿಕ್ರೊಜ್, ವೈಷ್ಣವಿ ಕುಲರ್ಣಿ, ಮಿತಾ ಜಿತೂರಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕಿ ಮಹೇಶ್ವರಿ ಉದಗಟ್ಟಿ, ಎನ್‌ಎಸ್‌ಎಸ್‌ ಕಾರ್ಯಕ್ರಮ ಅಧಿಕಾರಿ ಡಾ. ಶಿವಲೀಲಾ ವೈಜಿನಾಥ, ಹುಬ್ಬಳ್ಳಿ- ಧಾರವಾಡ ಹೆಮೋಫಿಲಿಯಾ ಸಂಸ್ಥೆ ಅಧ್ಯಕ್ಷ ರಾಜು ಕುಂದನಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಕಿಮ್ಸ್‌ನಿಂದ ಆಚರಣೆ: ಕಿಮ್ಸ್‌ನ ಕ್ಯಾನ್ಸರ್‌ ವಿಭಾಗವು ಐಎಂಎ ಹುಬ್ಬಳ್ಳಿ ಸಹಯೋಗದೊಂದಿಗೆ ಕ್ಯಾನ್ಸರ್‌ ದಿನದ ಅಂಗವಾಗಿ ವಾಕಾಥಾನ್‌ ಹಮ್ಮಿಕೊಂಡಿತ್ತು.

ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಮಾತನಾಡಿ ’ಕ್ಯಾನ್ಸರ್‌ ಬರದಂತೆ ಮೊದಲು ಎಲ್ಲರೂ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಬಂದರೂ ಚಿಕಿತ್ಸೆಗೆ ಬೇಕಾದ ಎಲ್ಲ ತಜ್ಞ ವೈದ್ಯರು ಹಾಗೂ ಸೌಲಭ್ಯಗಳು ನಮ್ಮಲ್ಲಿವೆ. ಬೆಂಗಳೂರಿನ ಕಿದ್ವಾಯಿ ಬಳಿಕ ನಮ್ಮ ಆಸ್ಪತ್ರೆಯಲ್ಲೇ ಹೆಚ್ಚು ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಕಿಮ್ಸ್‌ ಈಗ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಎಂದು ಸರ್ಕಾರದಿಂದ ಘೋಷಣೆಯಾಗಿದ್ದು, ಅದಕ್ಕೆ ತಕ್ಕಂತೆ ಎಲ್ಲಾ ವೈದ್ಯಕೀಯ ವಿಭಾಗಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು’ ಎಂದರು.

ಕಿಮ್ಸ್‌ ವಿಕಿರಣ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಗಿರಿಯಪ್ಪ, ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಐಎಂಎ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಎಸ್‌.ವೈ. ಮುಲ್ಕಿ ಪಾಟೀಲ, ವೈದ್ಯರಾದ ಕವಿತಾ, ಮುಲ್ಕಿಪಾಟೀಲ, ಮಂಜುನಾಥ ನೇಕಾರ, ಸರ್ಜಿಕಲ್‌ ಅಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶಶಿಧರ, ಡಾ. ಸುಭಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT