ಶುಕ್ರವಾರ, ಡಿಸೆಂಬರ್ 4, 2020
20 °C

ಮರ ಕಡಿದ ಮೂವರ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಮಂಗಳವಾರ 10 ಮರಗಳನ್ನು ಕಡಿದಿದ್ದು, ಈ ಸಂಬಂಧ ಗುತ್ತಿಗೆದಾರ ಸೇರಿ ಮೂವರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.

7 ಸಣ್ಣ ಹಾಗೂ ಮೂರು ದೊಡ್ಡ ಮರ (ಮಳೆ ಮರ) ಗಳನ್ನು ಕಡಿಯಲಾಗಿದ್ದು, ಈ ಸಂಬಂಧ ಗುತ್ತಿಗೆದಾರ ಸಾಗರ್ ಹಾಗೂ ಕಾರ್ಮಿಕರಾದ ಶ್ರೀನಿವಾಸ್, ಎಲ್‌.ವಿ. ಮಂಜುನಾಥ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಜಿಲ್ಲಾ ಪಂಚಾಯಿತಿ ಬಳಿ ಶೌಚಾಲಯ ಸೇರಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಮರ ಕಡಿಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

'ಇಲಾಖೆಯ ಅನುಮತಿ ಇಲ್ಲದೇ ಮರಗಳನ್ನು ಕಡಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇನ್ನೂ ಕೆಲವು ಮರಗಳನ್ನು ಕಡಿಯಲು ಅನುಮತಿ ಕೇಳಿದ್ದು, ಪರಿಶೀಲಿಸಿ ಅನುಮತಿ ಕೊಡುತ್ತೇವೆ' ಎಂದು ಡಿಆರ್‌‌ಎಫ್ಒ ದಿನೇಶ್ ತಿಳಿಸಿದರು.

‘ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಹೇಳಿದ್ದಾರೆ ಎಂದು ಕೆಲಸಗಾರರು ಮರ ಕಡಿದಿದ್ದಾರೆ. ಅವರು ಮರ ಕಡಿದಿದ್ದಾರೆ. ಮರ ಕಡಿದ ಮೇಲೆ ಅನುಮತಿ ನೀಡಿ ಎಂದು ಕೇಳುವುದು ಯಾವ ನ್ಯಾಯ? ಮೊದಲು ಆ ಎಂಜಿನಿಯರ್‌ಗೆ ದಂಡ ಹಾಕಬೇಕು’ ಎಂಬುದು ಪರಿಸರ ಪ್ರೇಮಿ ಕೆ.ಟಿ. ಗೋಪಾಲಗೌಡ ಅವರ ಒತ್ತಾಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು