ಹಸು ಪ್ರವೇಶಿಸದಂತೆ ಕ್ರಮ ಕೈಗೊಂಡ ರೈಲು ನಿಲ್ದಾಣ ಅಧಿಕಾರಿಗಳು

7

ಹಸು ಪ್ರವೇಶಿಸದಂತೆ ಕ್ರಮ ಕೈಗೊಂಡ ರೈಲು ನಿಲ್ದಾಣ ಅಧಿಕಾರಿಗಳು

Published:
Updated:

ಧಾರವಾಡ: ನಗರದ ರೈಲ್ವೇ ನಿಲ್ದಾಣದಲ್ಲಿ ಕಳೆದ 25ರಂದು ಬಿಡಾಡಿ ದನಗಳು ನುಗ್ಗಿ ಸೆಗಣಿ ಹಾಕಿದ್ದರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡ ನಿಲ್ದಾಣದ ಅಧಿಕಾರಿಗಳು ಕ್ಯಾಟಲ್ ಹರ್ಡಲ್‌ ಅಳವಡಿಸಿದ್ದಾರೆ.

ಜುಲೈ 26ರಂದು ಕೆ.ಎಸ್.ಜಯಂತ್ ಎಂಬುವವರು ಚಿತ್ರ ಸಮೇತ ಇದನ್ನು ನಿಲ್ದಾಣದ ದುಸ್ಥಿತಿಯನ್ನು ಹೇಳಿದ್ದರು. ಈ ಕುರಿತು ರಜತ್ ಉಳ್ಳಾಗಡ್ಡಿಮಠ ಎಂಬುವವರು ರೈಲ್ವೇ ಮಂತ್ರಿ ಹಾಗೂ ಸಂಸದ ಪ್ರಹ್ಲಾದ ಜೋಶಿಗೆ ಟ್ವೀಟ್ ಮಾಡಿದ್ದರು. ಈ ಸುದ್ದಿ ‘ಪ್ರಜಾವಾಣಿ’ಯಲ್ಲೂ ಪ್ರಕಟಗೊಂಡಿತ್ತು.

ತಕ್ಷಣ ಎಚ್ಚೆತ್ತುಕೊಂಡ ನಿಲ್ದಾಣದ ಅಧಿಕಾರಿಗಳು ನಿಲ್ದಾಣದ ಒಳಗೆ ಹಸುಗಳು ಬಾರದಂತೆ ಕ್ಯಾಟಲ್ ಹರ್ಡಲ್‌ ಅಳವಡಿಸಿದ್ದಾರೆ. ಈ ಕುರಿತು ರಜತ್ ಅವರು ‘ಪ್ರಜಾವಾಣಿ’ ಸಂದೇಶ ಕಳುಹಿಸಿ, ‘ಕಳೆದ ವಾರ ನಿಲ್ದಾಣದಲ್ಲಿ ಹಸುಗಲು ಸೆಗಣಿ ಹಾಕಿದ್ದ ಚಿತ್ರ ಹಾಕಿದ್ದೆ. ಅದು ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಇದರ ಪರಿಣಾಮವಾಗಿ ರೈಲ್ವೇ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದನ್ನು ಕಂಡು ಖುಷಿಯಾಯಿತು. ಅಧಿಕಾರಿಗಳಿಗೆ ಹಾಗೂ ಮಾಧ್ಯಮದವರಿಗೆ ಧನ್ಯವಾಗಳು’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !