ಶಾಂತಿಯಿಂದ ಗಣೇಶ ಚತುರ್ಥಿ ಆಚರಿಸಿ: ಪ್ರಹ್ಲಾದ್ ಜೋಶಿ

7
ಮೆರವಣಿಗೆ ಹಗಲಿನಲ್ಲಿ ಮಾಡುವ ಬಗ್ಗೆ ಯೋಚಿಸಿ: ಪೊಲೀಸ್ ಕಮಿಷನರ್ ನಾಗರಾಜ

ಶಾಂತಿಯಿಂದ ಗಣೇಶ ಚತುರ್ಥಿ ಆಚರಿಸಿ: ಪ್ರಹ್ಲಾದ್ ಜೋಶಿ

Published:
Updated:
Deccan Herald

ಹುಬ್ಬಳ್ಳಿ: ಗಣೇಶ ಚತುರ್ಥಿಯನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿ– ಧಾರವಾಡ ಪೊಲೀಸರು ನಗರದಲ್ಲಿ ಗುರುವಾರ ಆಯೋಜಿಸಿದ್ದ ಗಣೇಶ ಹಾಗೂ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ‘ನಮ್ಮ ಸಂಸ್ಕೃತಿಗೆ ತಕ್ಕಂತೆ ಹಾಗೂ ಪರಿಸರಕ್ಕೆ ಧಕ್ಕೆ ಆಗದಂತೆ ಗಣೇಶೋತ್ಸವ ಆಚರಿಸಿ. ಪಿಒಪಿ ಗಣಪತಿಯನ್ನು ಕೂರಿಸಬೇಡಿ. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಸದಭಿರುಚಿಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಬೇಡಿ’ ಎಂದರು.

ಕಮಿಷನರ್ ಎಂ.ಎನ್. ನಾಗರಾಜ ಮಾತನಾಡಿ, ಇನ್ನೊಬ್ಬರ ಭಾವನೆಗೆ ಧಕ್ಕೆ ಆಗದಂತೆ ಹಬ್ಬಗಳನ್ನು ಆಚರಿಸಬೇಕು. ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರ ಆಗಬಾರದು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೆಲವೊಂದು ಕ್ರಮ ಕೈಗೊಳ್ಳಲಾಗುತ್ತದೆಯೇ ವಿನಃ, ಯಾರ ಹಕ್ಕನ್ನೂ ಮೊಟಕುಗೊಳಿಸುವ ಉದ್ದೇಶದಿಂದ ಅಲ್ಲ. ಮೆರವಣಿಗೆಯನ್ನು ರಾತ್ರಿ ವೇಳೆ ಮಾಡುವ ಬದಲು ಹಗಲಿನಲ್ಲಿ ಮಾಡಿದರೆ ಮಹಿಳೆಯರು, ವೃದ್ಧರು, ಮಕ್ಕಳು ಭಾಗವಹಿಸುತ್ತಾರೆ. ಪೂಜೆ ಮಾಡಿಸುವವರಿಗೂ ಅನುಕೂಲವಾಗಲಿದೆ. ಗೋಕುಲ ರಸ್ತೆಯಲ್ಲಿ ಈ ಹಿಂದೆ 18 ಗಣಪತಿಗಳನ್ನು ಕೂರಿಸಲಾಗುತ್ತಿತ್ತು, ಆದರೆ ಅವರೆಲ್ಲರೂ ಸೇರಿ ಒಂದೇ ಗಣಪತಿ ಕೂರಿಸಲು ನಿರ್ಧರಿಸಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ. ಡಿಜೆ ಸಂಗೀತದ ಬದಲು ಭಕ್ತಿ ಸಂಗೀತವನ್ನು ಹಾಕಬಹುದು ಎಂದು ಹೇಳಿದರು.

9ನೇ ದಿನದ ಗಣೇಶ ವಿಸರ್ಜನೆ ದಿನವೇ ಮೊಹರಂ ಹಬ್ಬ ಸಹ ಬರುತ್ತದೆ. ಆಗ ಮೆರವಣಿಗೆಗೆ ವಿಭಿನ್ನ ಸಮಯವನ್ನು ನೀಡಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡಲು ಗಣೇಶ ಮಂಡಳಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಧಾರ್ಮಿಕ ಗುರುಗಳಾದ ತಾಜುದ್ದೀನ್ ಖಾದ್ರಿ, ಎಸ್.ಎಚ್‌. ಉಳ್ಳಾಗಡ್ಡಿ, ಗ್ಯಾನಿ ಸಿಂಗ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !