ಹುಬ್ಬಳ್ಳಿ: ಮೂರು ದಿನ ನಡೆದ ಎಸ್ಕಾಂ ಅಂತರ್ ಕಂಪನಿಗಳ 2025-26ನೇ ಸಾಲಿನ ಕ್ರೀಡಾಕೂಟಕ್ಕೆ ಶುಕ್ರವಾರ ತೆರೆಬಿತ್ತು. ಇಲ್ಲಿನ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಸೆಸ್ಕಾಂ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಬೆಸ್ಕಾಂ ತಂಡ ರನ್ನರ್ ಅಪ್ ಆಯಿತು. ಬೆಸ್ಕಾಂನ ಸಂಜಯ್ ಉತ್ತಮ ಬ್ಯಾಟರ್, ನರೇಂದ್ರ ಬಾಬು ಉತ್ತಮ ಬೌಲರ್ ಹಾಗೂ ಬೆಸ್ಕಾಂನ ಭರತ್ ಗೌಡ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಫುಟ್ಬಾಲ್ ಪಂದ್ಯದಲ್ಲಿ ಹೆಸ್ಕಾಂ ಚಾಂಪಿಯನ್ ಹಾಗೂ ಬೆಸ್ಕಾಂ ರನ್ನರ್ಅಪ್ ಆದವು. ಬೆಸ್ಕಾಂನ ಸುನೀಲ್ ಬೆಸ್ಟ್ ಸ್ಕೋರರ್, ಹೆಸ್ಕಾಂನ ಸುಬ್ರಹ್ಮಣ್ಯ ಬೆಸ್ಟ್ ಗೋಲ್ ಕೀಪರ್ ಹಾಗೂ ಹೆಸ್ಕಾಂನ ಅಜರುದ್ಧಿನ್ ಸರಣಿಯ ಉತ್ತಮ ಆಟಗಾರನಾಗಿ ಹೊರಹೊಮ್ಮಿದರು.

ಹಾಕಿಯಲ್ಲಿ ಹೆಸ್ಕಾಂ ಗೆಲುವು ಸಾಧಿಸಿದರೆ ಬೆಸ್ಕಾಂ ರನ್ನರ್ಅಪ್ ಆಯಿತು. ಮೆಸ್ಕಾಂನ ಪ್ರವೀಣ ಬೆಸ್ಟ್ ಗೋಲ್ ಕೀಪರ್, ಬೆಸ್ಕಾಂನ ಎನ್. ದೀಪಕ್ ಬೆಸ್ಟ್ ಫಾರ್ವರ್ಡ್ ಹಾಗೂ ಹೆಸ್ಕಾಂನ ಪ್ರವೀಣ ನಿಟ್ಟರ್ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ಪಡೆದರು.

ಬಿಲಿಯರ್ಡ್ಸ್ ಪಂದ್ಯದಲ್ಲಿ ಬೆಸ್ಕಾಂ ವಿಜೇತರಾದರೆ, ಮೆಸ್ಕಾಂ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು.

ಹೆಸ್ಕಾಂ ಮುಖ್ಯ ಎಂಜಿನಿಯರ್ ದೀಪಕ್ ಬಿ. ಕಾಮತ್, ಕೆಪಿಟಿಸಿಎಲ್ ನಿಯಂತ್ರಣಾಧಿಕಾರಿ ಮೈಕೆಲ್ ವಾಷಿಂಗ್ಟನ್, ಅಧಿಕಾರಿಗಳಾದ ಪಿ.ಆರ್. ಗವಿಕುಮಾರ್, ಪಿ.ಎಸ್. ಶಿಂಧೆ, ರಾಜೇಶ ಕಲ್ಯಾಣಶೆಟ್ಟಿ, ಮಂಜುನಾಥ ಆರ್. ದೊಡ್ಡಮನಿ, ಕೆ.ವಿ.ಪಾಗಿ, ವಿಜಯ ಎಲ್. ಗುಂಜೀಕರ್, ಪ್ರಸಾದ್ ಘಾಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.