ಚನ್ನಮ್ಮನ ಕಿತ್ತೂರು: ‘ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾಡಿಕೊಂಡ ಒಪ್ಪಂದದ ಅನುಗುಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ. ಶಿವುಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದರ ಮೂಲಕ ವಚನಭಂಗದ ಕಳಂಕದಿಂದ ತಪ್ಪಿಸಿಕೊಂಡಿರುವುದು ಸಂತಸವಾದ ವಿಷಯವಾಗಿದೆ’ ಎಂದು ದೇಗುಲಹಳ್ಳಿ-ಅಂಬಡಗಟ್ಟಿಯ ಗುರು ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆಲವು ಜನ ಸಚಿವರು ಮತ್ತು ಶಾಸಕರು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಡದಂತೆ ಒತ್ತಾಯಿಸಿದರೂ ಅದಕ್ಕೆ ಗಮನ ಕೊಡದೆ ಹೈಕಮಾಂಡ್ ಸೂಚನೆಯಂತೆ ನಡೆದುಕೊಂಡಿರುವುದು ಅವರ ಬಗ್ಗೆ ಸಾರ್ವಜನಿಕರು ತಳೆದಿದ್ದ ಅಭಿಮಾನವನ್ನು ಹೆಚ್ಚಿಸಿದಂತಾಗಿದೆ’ ಎಂದು ತಿಳಿಸಿದರು.

‘ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ ಅವರ ಹೆಚ್ಚು ಅವಧಿಗೆ ಮುಖ್ಯಮಂತ್ರಿ ಆದ ದಾಖಲೆ ಮುರಿಯಲು ಡಿ.ಕೆ. ಶಿವಕುಮಾರ್ ಬೆಂಬಲಿಸಿದರು. ಈಗ ಶಿವಕುಮಾರ್ ಅವರಿಗೂ ಪ್ರಾಂಜಲ ಮನಸಿನಿಂದ ಸಿದ್ದರಾಮಯ್ಯ ಆಶೀರ್ವಾದ ಮಾಡಿದ್ದಾರೆ. ಇದೇ ಪ್ರಕಾರ ಶಿವಕುಮಾರ್ ಅವರಿಗೆ ಬೆಂಬಲ ಮತ್ತು ಮಾರ್ಗದರ್ಶನ ಮುಂದುವರೆಸಲಿ’ ಎಂದು ಕೇಳಿಕೊಂಡಿದ್ದಾರೆ.

ಹಿಂದೆಯೂ, ಅಧಿಕಾರ ಬಿಟ್ಟುಕೊಡದ ಸಿದ್ದರಾಮಯ್ಯ ಅವರಿಗೆ ‘ಮಾಡಿಕೊಂಡ ಒಪ್ಪಂದದಂತೆ ಶಿವಕುಮಾರ ಅವರಿಗೆ ಅಧಿಕಾರ ಬಿಟ್ಟುಕೊಟ್ಟು ನುಡಿದಂತೆ ನಡೆಯಲಿ’ ಎಂದು ಹೇಳುವುದರ ಮೂಲಕ ವೀರೇಶ್ವರ ಸ್ವಾಮೀಜಿ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-21-1365643245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.