ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಜಂಟಿ ಮುನ್ನಡೆಯಲ್ಲಿ ಶ್ರೀಯಾ, ವರುಣ್‌

Last Updated 15 ಸೆಪ್ಟೆಂಬರ್ 2019, 13:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಗ್ರ ಶ್ರೇಯಾಂಕದ ಶ್ರೀಯಾ ಆರ್‌. ರೇವಣಕರ್‌ ಹಾಗೂ ವರುಣ್‌ ವಿ. ನಾವಳ್ಳಿ ಸೇರಿದಂತೆ ನಾಲ್ವರು ಸ್ಪರ್ಧಿಗಳು ಶನಿವಾರ ಆರಂಭವಾದ ಜಿಲ್ಲಾ ಚೆಸ್‌ ಟೂರ್ನಿಯಲ್ಲಿ ಜಂಟಿ ಅಗ್ರಸ್ಥಾನ ಹೊಂದಿದ್ದಾರೆ.

ಧಾರವಾಡ ಜಿಲ್ಲಾ ಚೆಸ್‌ ಸಂಸ್ಥೆ ಮತ್ತು ಇನ್ನರ್‌ವೀಲ್‌ ಕ್ಲಬ್‌ ಜಂಟಿಯಾಗಿ ಹೆಬಸೂರು ಭವನದಲ್ಲಿ ಸ್ವಿಸ್‌ ಲೀಗ್‌ ಮಾದರಿಯಲ್ಲಿ ಹಮ್ಮಿಕೊಂಡಿರುವ ಟೂರ್ನಿಯಲ್ಲಿ ಐದನೇ ಸುತ್ತಿನ ಅಂತ್ಯಕ್ಕೆ ಶ್ರೀಯಾ, ವರುಣ್‌, ವಿಶ್ವೇಶ್ವರಯ್ಯ ಗುರುಮಠ, ಟಿ.ಎಸ್‌. ನವೀನ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಇವೆರೆಲ್ಲರೂ ತಲಾ ಐದು ಅಂಕಗಳನ್ನು ಹೊಂದಿದ್ದಾರೆ. ಒಟ್ಟು ಒಂಬತ್ತು ಸುತ್ತುಗಳ ಟೂರ್ನಿ ಇದಾಗಿದ್ದು, ಉಳಿದ ನಾಲ್ಕು ಸುತ್ತುಗಳು ಭಾನುವಾರ ಜರುಗಲಿವೆ.

ಅಂತರರಾಷ್ಟ್ರೀಯ ರೇಟಿಂಗ್‌ ಹೊಂದಿರುವ 29 ಸ್ಪರ್ಧಿಗಳು ಸೇರಿದಂತೆ ಒಟ್ಟು 215 ಜನ ಪಾಲ್ಗೊಂಡಿದ್ದಾರೆ.

ಕೆ.ಎಲ್‌.ಇ. ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಬಿ.ಎಸ್‌. ಅನಾಮಿ ಟೂರ್ನಿಗೆ ಚಾಲನೆ ನೀಡಿದರು. ಜಿಲ್ಲಾ ಚೆಸ್‌ ಸಂಸ್ಥೆ ಅಧ್ಯಕ್ಷ ವಿ.ವಿ. ಮಂಗಳವಾಡೇಕರ್, ಕಾರ್ಯದರ್ಶಿ ವಿನಯ ಕುರ್ತಕೋಟಿ, ಟೂರ್ನಿಯ ಮುಖ್ಯಸ್ಥೆ ಕವಿತಾ ಸಾವಳಗಿ, ಹುಬ್ಬಳ್ಳಿ ಇನ್ನರ್‌ವೀಲ್‌ ಕ್ಲಬ್‌ ಅಧ್ಯಕ್ಷ ಶ್ರುತಿ ಹೆಬಸೂರು, ಕಾರ್ಯದರ್ಶಿ ಕೆ. ಪ್ರಿಯದರ್ಶಿನಿ, ಡಾ. ನಾಗರಾಜ ಪಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT