ಶನಿವಾರ, ಮಾರ್ಚ್ 6, 2021
21 °C

‘ಚಿಪ್ಸ್‌ ಕಾರ ಕಡ್ಲಿ’ ಕನ್ನಡ ಆಲ್ಬಂ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಉದಯೋನ್ಮುಖ ಯುವ ಕಲಾವಿದರು ಸೇರಿಕೊಂಡು ನಿರ್ಮಿಸಿರುವ ‘ಚಿಪ್ಸ್‌ ಕಾರ ಕಡ್ಲಿ’ ಕನ್ನಡ ಆಲ್ಬಂ ಗುರುವಾರ ಬಿಡುಗಡೆಯಾಯಿತು.

ಶ್ರೀಗುರು ಆಲದಿ ಅವರು ಗೀತೆ (ಪಾರ್ಟಿ ಸಾಂಗ್‌) ರಚಿಸಿ, ಸಂಗೀತ ಸಂಯೋಜಿಸಿ ಹಾಡಿರುವ ನಾಲ್ಕು ನಿಮಿಷದ ಗೀತೆಯನ್ನು ಒಳಗೊಂಡಿರುವ ಈ ಆಲ್ಬಂನಲ್ಲಿ ‘ಮಿಸ್‌ ಸೌತ್‌ ಇಂಡಿಯಾ’ ಪ್ರಶಸ್ತಿ ವಿಜೇತೆ ಡಾ.ಶ್ರುತಿ ಹೆಗಡೆ, ಶ್ರೀಗುರು ಆಲದಿ, ರಾಜ್‌ ಡೋಲಾ, ಅಮೃತಾ, ಖುಷಿ, ಶಾಂಭವಿ, ವರ್ಷಾ, ಅಂಕಿತಾ, ಶ್ರೀಧರ್‌, ಶ್ರೀಕಾಂತ್‌, ಜಗ್ಗು, ಪ್ರಮೋದ್‌, ರಘು, ಆದಿತ್ಯಾ, ರಾಜೇಶ್‌ ನಟಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀಗುರು, ಪಬ್‌ ಸಂಸ್ಕೃತಿ, ಧೂಮಪಾನ, ಮದ್ಯಪಾನ ವಿರುದ್ಧ ಜಾಗೃತಿ ಮತ್ತು ವಾಟ್ಸ್‌ಆ್ಯಪ್‌, ಪೇಸ್‌ಬುಕ್‌ ಲೈಕ್‌, ಕಾಮೆಂಟ್‌ಗಳಿಂದಲೂ ಏನೂ ಆಗದು. ಜೀವನದಲ್ಲಿ ಮಹೋನ್ನತ ಸಾಧನೆ ಮಾಡಬೇಕು ಎಂಬ ಸಂದೇಶವನ್ನು ಯುವ ಜನರಿಗೆ ಈ ಆಲ್ಬಂನಲ್ಲಿ ತಿಳಿಸಲಾಗಿದೆ ಎಂದರು.

ಆಲ್ಬಂ ನಿರ್ಮಾಣಕ್ಕೆ ₹2.5 ಲಕ್ಷ ವೆಚ್ಚವಾಗಿದೆ. ಯೂಟೂಬ್‌ನಲ್ಲಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.